ಜಿಲ್ಲೆ

ಪಹಲ್ಗಾಮ್ ಹತ್ಯಾಕಾಂಡ ಆತಂಕಕಾರಿ: ಉಪ್ಪಳದಲ್ಲಿ ಎಡನೀರು ಸ್ವಾಮೀಜಿ ಕಳವಳ

ಸೌಮ್ಯ ಆರ್

ಉಪ್ಪಳ: ಹಿಂದು ರಾಷ್ಟ್ರದ ಮುಕುಟಮಣಿ ಕಾಶ್ಮೀರದಲ್ಲಿ ಧರ್ಮ ವಿಚಾರಿಸಿ ನಡೆಸಿರುವ ಹತ್ಯಾಕಾಂಡ ಆತಂಕಕಾರಿಯಾಗಿದ್ದು, ಹಿಂದೂ ಸಮಾಜ ಜಾಗೃತವಾಗಬೇಕಿದೆ ಎಂದು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳು ಹೇಳಿದರು.

ಪಹಲ್ಗಾಮ್ ದಾಳಿ ಖಂಡಿಸಿ ‘ಧರ್ಮದ ಉದ್ಧಾರಕ್ಕಾಗಿ, ಅಧರ್ಮದ ಅಂತ್ಯಕ್ಕಾಗಿ’ ಎಡನೀರು ಶ್ರೀಶಮಕರಾಚಾರ್ಯ ಮಹಾಸಂಸ್ಥಾನ ಹಾಗು ಕೊಂಡೆವೂರು ನಿತ್ಯಾನಂದ ಯೋಗಾಶ್ರಮ ವಿವಿಧ ಹಿಂದು ಸಂಟನೆಗಳ ಸಹಯೋಗದೊಂದಿಗ ಭಾನುವಾರ ಉಪ್ಪಳ ಐಲ ಮೈದಾನದಲ್ಲಿ ಆಯೋಜಿಸಿದ್ದ ಹುತಾತ್ಮರಿಗೆ ನಮನ ಹಾಗು ವಿರಾಟ್ ಹಿಂದು ಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಕಾಸರಗೋಡು ಚಿನ್ಮಯ ಮಿಷನ್‌ನ ಶ್ರೀ ವಿವಿಕ್ತಾನಂದ ಸರಸ್ವತಿ ಸ್ವಾಮೀಜಿ, ಕೊಂಡೆವೂರು ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಖಂಡಿಸಿ ಮಾತನಾಡಿದರು.

ಸಾಮಾಜಿಕ ಮುಂದಾಳು ಡಾ.ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಅಧ್ಯಕ್ಷತೆ ವಹಿಸಿದ್ದರು. ಯುವ ವಾಗ್ಮಿ ಜಿಜೇಶ್ ಪಟ್ಟೇರಿ ಮಲಯಾಳಂನಲ್ಲಿ ಮುಖ್ಯ ಭಾಷಣ ಮಾಡಿದರು.

ಮೈಸೂರು ರಂಗಾಯಣದ ನಿಕಟಪೂರ್ವ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅವರು ಕನ್ನಡದಲ್ಲಿ ಪ್ರಧಾನ ಭಾಷಣಗೈದರು. ಎಡನೀರು ಮಠದ ಕಾರ್ಯನಿರ್ವಹಣಾಧಿಕಾರಿ ರಾಜೇಂದ್ರ ಕಲ್ಲೂರಾಯ ಸ್ವಾಗತಿಸಿದರು. ಶ್ರೀಧರ ಶೆಟ್ಟಿ ಪರಂಕಿಲ ಹಾಗೂ ಕಮಲಾಕ್ಷ ಐಲ ನಿರೂಪಿಸಿದರು.

ಸತತ ದಾಳಿಗಳ ಹೊರತಾಗಿಯೂ ಸೆಟೆದು ನಿಂತಿರುವುದು ಸನಾತನ ಧರ್ಮ ಪರಂಪರೆಯ ಶಕ್ತಿ. ಕಾಶ್ಮೀರ ಪಂಡಿತರ ಕಣ್ಣೀರಿಗೆ ಅಂತಿಮ ಉತ್ತರ ಕೊಡುವ ಕಾಲ ಸನ್ನಿಹಿತವಾಗಿದೆ. ಹಿಂದು ಸಮಾಜ ಕಾಲಾಕಾಲಕ್ಕೆ ಮೌಢ್ಯಗಳನ್ನು ನಿವಾರಿಸಿ ಸಮೃದ್ಧಗೊಂಡಿದೆ. ಆದರೆ ಮತಾಂಧ ಸಮುದಾಯ ಅಪ್ರಸ್ತುತ ಪುಸ್ತಕಹಿಡಿದು ಅದರಲ್ಲಿರುವ ಅಪ್ರಬುದ್ಧ ಹೇಳಿಕೆಗಳನ್ನು ಜಾರಿಗೆ ತರುತ್ತಿರುವುದು ಮೂಢತ್ವದ ಪರಮಾವಧಿ. ಅಡ್ಡಂಡ ಕಾರ್ಯಪ್ಪ ಮೈಸೂರು ರಂಗಾಯಣ ನಿಕಟಪೂರ್ವ ನಿರ್ದೇಶಕ https://www.vijayavani.net/eight-accused-arrested-in-suhas-shetty-murder-case-revenge-and-hatred-were-the-reasons-for-the-murder https://www.vijayavani.net/water-problem-14