ಜಿಲ್ಲೆ

ಹಿಂದು ಕಾರ್ಯಕರ್ತರಿಂದ ಗೋವುಗಳ ರಕ್ಷಣೆ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ

ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಗೋವುಗಳನ್ನು ರಕ್ಷಿಸಿ ಗೋ ಶಾಲೆಗೆ ಕಳುಹಿಸಿದ ಘಟನೆ ನಗರದಲ್ಲಿ ಬುಧವಾರ ಸಂಜೆ ನಡೆದಿದೆ.

ಇಲ್ಲಿನ ಭೂಸಪ್ಪ ಚೌಕ್​ ಬಳಿಯ ಮನೆಯೊಂದರಲ್ಲಿ ಅಂದಾಜು 14 ಗೋವುಗಳನ್ನು ಸಂಗ್ರಹಿಸಿಡಲಾಗಿತ್ತು. ಈ ಮಾಹಿತಿ ಅರಿತ ವಿಶ್ವ ಹಿಂದು ಪರಿಷದ್​ ಹಾಗೂ ಬಜರಂಗದಳ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿ ಪರಿಶೀಲಿಸಿದ್ದಾರೆ. ಆಗ ಸಂಬಂಧಿಸಿದವರ ಬಳಿ ಯಾವುದೇ ದಾಖಲಾತಿ ಇರದ ಕಾರಣ ಅವುಗಳನ್ನು ವಶಕ್ಕೆ ಪಡೆದು ರಕ್ಷಣೆ ಮಾಡಲಾಗಿದೆ.

ಗೋವುಗಳನ್ನು ಎಲ್ಲಿಂದ? ಯಾತಕ್ಕಾಗಿ ತರಲಾಗಿತ್ತು ಎಂಬ ಮಾಹಿತಿ ಸಹ ಸಂಗ್ರಹಿಸಿಟ್ಟವರ ಬಳಿ ಇರಲಿಲ್ಲ. ಹೀಗಾಗಿ ನಗರ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡು ಗೋವುಗಳನ್ನು ಕಲಘಟಗಿ ರಸ್ತೆಯಲ್ಲಿನ ಗಿರಿನಗರ ಬಳಿಯ ಗೋ ಶಾಲೆಗೆ ಸಾಗಿಸಿದ್ದಾರೆ.