ವಿಜಯಪುರ : ಬೋಹರ್ ರಾಜೇಂದ್ರ ಸಿಂಹ ಅವರ 50ನೇ ಹುಟ್ಟುಹಬ್ಬದ ಅಂಗವಾಗಿ 1949 ಸೆ. 14ರಂದು ಹಿಂದಿಯನ್ನು ಕೇಂದ್ರ ಸರ್ಕಾರದ ಆಡಳಿತ ಭಾಷೆಯಾಗಿ ೂಷಿಸಿತು. ಬೋಹ್ ರಾಜೇಂದ್ರ ಸಿಂಹರ ಸ್ಮರಣೆ ಹಿನ್ನೆಲೆಯಲ್ಲಿ ಪ್ರತಿವರ್ಷ ಸೆ. 14 ರಂದು ಹಿಂದಿ ದಿವಸ ಆಚರಿಸಲಾಗುತ್ತಿದೆ ಎಂದು ಪ್ರಾಚಾಯೆರ್ ವಿಜಯಲಕ್ಷಿ$್ಮ ಪಟ್ಟೇದ ಹೇಳಿದರು.ನಗರ ಹೊರ ವಲಯದ ಶ್ರೀ ಸಿದ್ಧೇಶ್ವರ ಸಂಸ್ಥೆಯ ಸಂಗನಬಸವ ಶಿಶುನಿಕೇತನ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಹಿಂದಿ ದಿವಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, 1949 ಸೆ. 14 ರಂದು ರಾಷ್ಟ್ರದ ಅಧಿಕೃತ ಆಡಳಿತ ಭಾಷೆಯಾಗಿ ಹಿಂದಿಯನ್ನು ೂಷಣೆ ಮಾಡಲಾಯಿತು. ಮೂಲ ದೇವನಾಗರಿ ಲಿಪಿಯಲ್ಲಿ ರಚಿತವಾಗಿರುವ ಹಿಂದಿ ಸದ್ಯದ ಕೇಂದ್ರದ ಆಡಳಿತ ಭಾಷೆಯಾಗಿದೆ ಎಂದರು.
ಸಂಸ್ಥೆ ಚೇರ್ಮನ್ ಬಸಯ್ಯ ಹಿರೇಮಠ, ಶಾಲೆಯ ನಾಮಿನಿ ಚೇರ್ಮನ್ ಎಸ್.ಎಚ್. ನಾಡಗೌಡ, ಸಿಎಒ ಎಚ್. ವೆಂಕಟೇಶ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಹಿಂದಿ ದಿವಸ ಅಂಗವಾಗಿ ವಿದ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆ ನಡೆಯಿತು. ನಂತರ ವಿವಿಧ ಸಾಂಸತಿಕ ಕಾರ್ಯಕ್ರಮಗಳು ನಡೆದವು.
ವಿಜಯಪುರದ ಸಂಗನಬಸವ ಶಿಶುನಿಕೇತನ ಶಾಲೆಯಲ್ಲಿ ಹಮ್ಮಿಕೊಂಡ ಹಿಂದಿ ದಿವಸ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಸಾಂಸತಿಕ ಕಾರ್ಯಕ್ರಮಗಳು ನಡೆದವು.