ಜಿಲ್ಲೆ

ಹಿಂದಿ ಬಲ್ಲವರಿಗೆ ವಿಶ್ವ ಪರ್ಯಟನೆ ಸುಲಭ

ಪ್ರಾಧ್ಯಾಪಕಿ ಕೃತಿಕಾ ಪಿ. ಶೆಣೈ ಅಭಿಪ್ರಾಯ

ವಿಜಯವಾಣಿ ಸುದ್ದಿಜಾಲ ಉಡುಪಿ

ವಿಶ್ವದ ಮೂಲೆ ಮೂಲೆಯಲ್ಲಿಯೂ ಹಿಂದಿ ಭಾಷೆ ಬಳಕೆಯಾಗುತ್ತಿದೆ. ಹೀಗಾಗಿ ಪ್ರಪಂಚದ ಯಾವುದೇ ಭಾಗಕ್ಕೆ ಪರ್ಯಟನೆಗೆ ಹೋದರೂ ಹಿಂದಿ ಬಲ್ಲವರು ಆತಂಕ ಪಡಬೇಕಿಲ್ಲ. ಹಿಂದಿಯನ್ನು ಪ್ರಚಾರ ಮಾಡುವುದೆಂದರೆ ಇತರ ಭಾಷೆಗಳನ್ನು ವಿರೋಧಿಸುವುದಲ್ಲ. ಬದಲಾಗಿ ಎಲ್ಲ ಭಾರತೀಯ ಭಾಷೆಗಳನ್ನು ಗೌರವಿಸುವುದು ಎಂದರ್ಥ ಎಂದು ಉಡುಪಿಯ ಮಹಾತ್ಮ ಗಾಂಧಿ ಮೆಮೋರಿಯಲ್​ ಕಾಲೇಜ್​ನ ಹಿಂದಿ ವಿಭಾಗದ ಪ್ರಾಧ್ಯಾಪಕಿ ಕೃತಿಕಾ ಪಿ. ಶೆಣೈ ತಿಳಿಸಿದರು.

ಉಡುಪಿಯ ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನಲ್ಲಿ ಹಿಂದಿ ಭಾಷೆಯ ವಿಸ್ತಾರತೆ, ಮಹತ್ವ ಹಾಗೂ ಜೀವನದಲ್ಲಿ ಹಿಂದಿಯ ಉಪಯೋಗದ ಕುರಿತು ಅರಿವು ಮೂಡಿಸಲು ಆಯೋಜಿಸಿದ್ದ ಹಿಂದಿ ದಿವಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾಲೇಜಿನ ಪ್ರಾಂಶುಪಾಲ ಡಾ.ಚಂದ್ರಕಾಂತ ಭಟ್​ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಘಟಕದ ಸಂಯೋಜಕ ಡಾ. ರಾಘವೇಂದ್ರ ಎಲ್​. ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ಶ್ರೀಧವ ಪ್ರಾರ್ಥಿಸಿದರು. ಕೃಷ್ಣ ಸ್ವಾಗತಿಸಿದರು. ಅಭಿರಾಮ ಕಾರ್ಯಕ್ರಮ ನಿರೂಪಿಸಿದರು. ದ್ವಿತೀಯ ಬಿಕಾಂ ವಿದ್ಯಾರ್ಥಿನಿಯರು ಗಾಯನದ ಮೂಲಕ ಹಿಂದಿಯ ಮಹತ್ವ ಪ್ರಸ್ತುತಪಡಿಸಿದರು. ಹಿಂದಿ ವಿಭಾಗದ ಮುಖ್ಯಸ್ಥ ಅಕ್ಷಯಕುಮಾರ್​ ಪಿ. ವಂದಿಸಿದರು.

&&&&&&&&&&&&&&

ೋಟೋ: ಯುಡಿಪಿ&13&3&ಹಿಂದಿ

ಉಡುಪಿಯ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನಲ್ಲಿ ಆಯೋಜಿಸಿದ್ದ ಹಿಂದಿ ದಿವಸ ಕಾರ್ಯಕ್ರಮದಲ್ಲಿ ಕೃತಿಕಾ ಪಿ. ಶೆಣೈ ಮಾತನಾಡಿದರು. ಡಾ.ಚಂದ್ರಕಾಂತ ಭಟ್​, ಡಾ. ರಾಘವೇಂದ್ರ ಎಲ್​., ಅಕ್ಷಯಕುಮಾರ್​ ಪಿ. ಇದ್ದರು.