ಸುಬ್ರಹ್ಮಣ್ಯ: ಮಧ್ಯಪ್ರದೇಶದ ಭೂಪಾಲ್‌ನಲ್ಲಿ ನಡೆದ 67ನೇ ರಾಷ್ಟ್ರೀಯ ರೈಫಲ್ಸ್‌ನ ವೈಯಕ್ತಿಕ ಶೂಟಿಂಗ್ ವಿಭಾಗದಲ್ಲಿ ಸುಬ್ರಹ್ಮಣ್ಯ ಸಮೀಪದ ವೆಂಕಟಪುರದ ಹಿಮಾಂಶು ಎಂ.ಎಸ್. ಹುಡುಗರ ವಿಭಾಗದ ವೈಯಕ್ತಿಕ ಚಾಂಪಿಯನ್‌ಶಿಪ್ ಪಡೆದಿದ್ದಾರೆ. ಇವರಿಗೆ ಪ್ರಥಮೇಶ್ ಕೋಚ್ ಆಗಿ ತರಬೇತಿ ನೀಡಿದ್ದಾರೆ. ಕರ್ನಾಟಕ ರಾಜ್ಯ ರೈಫಲ್ಸ್ ಅಸೋಸಿಯೇಷನ್ ವತಿಯಿಂದ ಕೇರಳದ ತಿರುವನಂತಪುರ ಹಾಗೂ ಗೋವಾದಲ್ಲಿ ನಡೆದ ಏರ್ ರೈಫಲ್ಸ್ ಸ್ಪರ್ಧೆಯಲ್ಲಿ ಕೂಡ ಭಾಗವಹಿಸಿದ್ದಾರೆ. ಇವರು ಸುಬ್ರಹ್ಮಣ್ಯದ ಕುಲ್ಕುಂದ ಸಮೀಪದ ವೆಂಕಟಪುರ ನಿವಾಸಿ ಎಂ.ಡಿ.ಶಿವಪ್ರಸಾದ್ ಮತ್ತು ವಿಜಯಲಕ್ಷ್ಮೀ ದಂಪತಿಗಳ ಪುತ್ರ.