ಯಲಬುರ್ಗಾ ತಾಲೂಕಿನ ವಜ್ರಬಂಡಿ ಗ್ರಾಮದಲ್ಲಿ ಗುಡ್ಡದ ಮಳೆಮಲ್ಲೇಶ್ವರ ಜಾತ್ರೆ ನಿಮಿತ್ತ ಶುಕ್ರವಾರ ಲಘು ರಥೋತ್ಸವ ಜರುಗಿತು. 
ಜಿಲ್ಲೆ

ಗುಡ್ಡದ ಮಳೆಮಲ್ಲೇಶ್ವರ ಜಾತ್ರೆ ಜೋರು

Kopala - Desk - Eraveni

ಯಲಬುರ್ಗಾ: ತಾಲೂಕಿನ ವಜ್ರಬಂಡಿ ಗ್ರಾಮದಲ್ಲಿ ಶುಕ್ರವಾರ ಗುಡ್ಡದ ಮಳೆಮಲ್ಲೇಶ್ವರ ಜಾತ್ರೆ ವಿಜೃಂಭಣೆಯಿಂದ ಜರುಗಿತು.

ಬೆಳಗ್ಗೆ ದೇವರ ಮೂರ್ತಿಗೆ ಅಭೀಷೇಕ ಸೇರಿ ವಿವಿಧ ಧಾರ್ಮಿಕ ಕಾರ್ಯಗಳು ಜರುಗಿದವು. ಈ ಭಾಗದ ಪ್ರಸಿದ್ಧ ಮುಂಗೈ ಕ್ರೀಡೆ, ಕಬಡ್ಡಿ ಸೇರಿ ಮೊದಲಾದ ಸ್ಪರ್ಧೆಗಳು ನಡೆದವು. ಬಳಿಕ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಂಜೆ 5ಕ್ಕೆ ಲಘು ರಥೋತ್ಸವ ಜರುಗಿತು. ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಗ್ರಾಮ ಹಾಗೂ ಸುತ್ತಲಿನ ಹಳ್ಳಿಗಳ ಭಕ್ತರು ಉತ್ತತ್ತಿ, ಬಾಳೆ ಹಣ್ಣು ಎಸೆದು ಭಕ್ತಿ ಸರ್ಮಪಿಸಿದರು.

ಲಿಂಗಲಬಂಡಿ ಮೌನೇಶ್ವರ ಮಠದ ಶ್ರೀ ಉಳಿವೇಂದ್ರ ಸ್ವಾಮೀಜಿ, ಗಂಗೂಬಾಯಿ ಎಚ್ಚರಸ್ವಾಮಿ ಸಾನ್ನಿಧ್ಯ ವಹಿಸಿದ್ದರು. ಜಾತ್ರೆಗೆ ಆಗಮಿಸಿದ ಭಕ್ತರು ಕೆರೆಯಲ್ಲಿ ಸ್ನಾನ ಮಾಡಿ ದೇವರ ದರ್ಶನ ಪಡೆದರು. ನಂತರ ಕೆರೆ ನೀರನ್ನು ತುಂಬಿಕೊಂಡು ಹೋಗಿ ಜಮೀನುಗಳಲ್ಲಿ ಸಿಂಪಡಣೆ ಮಾಡಿದರೇ ಬೆಳೆ ಚೆನ್ನಾಗಿ ಬರುತ್ತದೆ ಎಂಬ ನಂಬಿಕೆ ಜನರಲ್ಲಿ ಇದೆ. ಈ ಹಿನ್ನೆಲೆಯಲ್ಲಿ ಕೆರೆಯ ನೀರನ್ನು ತೆಗೆದುಕೊಂಡು ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.