ಸಿರವಾರ ಯುಗಾದಿ ಹಬ್ಬದ ನಿಮಿತ್ತ ಶ್ರೀಶೈಲದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಪಾದಯಾತ್ರೆ ಕೈಗೊಂಡ ಭಕ್ತ ಹೃಯಘಾತದಿಂದ ಮೃತಪಟ್ಟಿರುವ ಘಟನೆ ಗುರುವಾರ ಆಂಧ್ರದ ಶ್ರೀಶೈಲದ ಭೀಮನ ಕೊಳದ ಹತ್ತಿರ ಜರುಗಿದೆ.
ತಾಲೂಕಿನ ಕಲ್ಲೂರು ಗ್ರಾಮದ ಬಸವರಾಜ ಯಾದವ್(೪೦) ಮೃತಪಟ್ಟ ವ್ಯಕ್ತಿ.
ಯುಗಾದಿ ಜಾತ್ರೆ ನಿಮಿತ್ತ ಕಲ್ಲೂರು ಗ್ರಾಮದಿಂದ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಪಾದಯಾತ್ರೆ ಮಾಡುವ ಸಂದರ್ಭದಲ್ಲಿ ಶ್ರೀಶೈಲದ ಭೀಮನ ಕೊಳದ ಹತ್ತಿರ ವಿಶ್ರಾಂತಿ ಪಡೆಯುವ ಸಂದರ್ಭದಲ್ಲಿ ಹೃದಯಘಾತದಿಂದ ಮೃತಪಟ್ಟಿದ್ದಾರೆ. ಶ್ರೀಶೈಲಂನ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.