ಜಿಲ್ಲೆ

ಕೂಳೂರಿನಲ್ಲಿ ಹೆದ್ದಾರಿ ಬ್ಲಾಕ್, ರಾತ್ರಿ ವರೆಗೂ ವಾಹನ ದಟ್ಟಣೆ

reportermng

ಮಂಗಳೂರು: ಮೋದಿ ಆಗಮನ ಹಿನ್ನೆಲೆಯಲ್ಲಿ ವಿವಿಧೆಡೆ ರಸ್ತೆ ಕಾಮಗಾರಿಗಳು ಭರದಿಂದ ನಡೆಯುತ್ತಿದ್ದು, ತೇಪೆ ಹಾಕುವ ಕಾಮಗಾರಿ ಹಿನ್ನೆಲೆಯಲ್ಲಿ ಕೂಳೂರಿನಲ್ಲಿ ಭಾನುವಾರ ಸಂಜೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ವಾಹನ ದಟ್ಟಣೆ ಉಂಟಾಯಿತು. ಮಂಗಳೂರು ಸುರತ್ಕಲ್ ಕಡೆಗೆ ತೆರಳುವ ಒಂದು ಬದಿಯ ರಸ್ತೆಯಲ್ಲಿ ಸಂಜೆ 4 ಗಂಟೆಯಿಂದ ಆರಂಭಗೊಂಡ ದಟ್ಟಣೆ ರಾತ್ರಿ ವರೆಗೂ ಮುಂದುವರಿಯಿತು. ರಜೆ ಹಿನ್ನೆಲೆಯಲ್ಲಿ ಬೀಚ್‌ಗಳಿಗೆ ಹೋಗುವವರು ಬೇಕಾದವರು, ಪ್ರವಾಸಿ ತಾಣಗಳಿಗೆ ತೆರಳುವವರು, ತರ್ತು ಕಾರ್ಯ ನಿಮಿತ್ತ ಹೋಗಬೇಕಾದವರು ಬ್ಲಾಕ್‌ನಿಂದ ಸಮಸ್ಯೆ ಅನುಭವಿಸಿದರು. ಕೊಟ್ಟಾರಚೌಕಿ ಫ್ಲೈಓವರ್ ವರೆಗೂ ದಟ್ಟಣೆಯಿತ್ತು. ಒಂದೆರಡು ಸಣ್ಣಪುಟ್ಟ ಅಪಘಾತಗಳೂ ಉಂಟಾಯಿತು. ಎರಡು ಮೂರು ಆಂಬುಲೆನ್ಸ್‌ಗಳೂ ಸಿಲುಕಿಕೊಂಡಿತ್ತು. ಕಳೆದ ಕೆಲವು ದಿನಗಳಿಂದ ಕೂಳೂರು ಭಾಗದಲ್ಲಿ ಹೆದ್ದಾರಿಯಲ್ಲಿ ವಾಹನ ದಟ್ಟಣೆ ಸಾಮಾನ್ಯವಾಗಿದೆ.