ರಬಕವಿ/ಬನಹಟ್ಟಿ : ಅವಳಿ ನಗರದಲ್ಲಿ ಮೊಹರಂ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ನಗರದ ಪ್ರಮುಖ ಪ್ರದೇಶಗಳಲ್ಲಿ ಡೋಲಿಗಳನ್ನು ಪ್ರತಿಷ್ಠಾಪಿಸಲಾಗಿತ್ತು. ನಿತ್ಯ ಮುಸ್ಲಿಂ ಹಾಗೂ ಹಿಂದುಗಳು ಡೋಲಿಗಳಿಗೆ ನೈವೇದ್ಯ ಅರ್ಪಿಸಿದರು.
ಶನಿವಾರ ಬೆಳಗ್ಗೆ ಸ್ಥಳೀಯ ಮಂಗಳವಾರ ಪೇಟೆಯ ಹಳೆಯ ಗ್ರಂಥಾಲಯ, ರಬಕವಿ ಶಂಕರಲಿಂಗ ದೇವಸ್ಥಾನ ಸೇರಿ ವಿವಿಧೆಡೆ ಡೋಲಿಗಳನ್ನು ಪ್ರತಿಷ್ಠಾಪಿಸಲಾಗಿತ್ತು. ನಂತರ ಅಲ್ಲಿ ಹಿಂದಿ, ಉರ್ದು ಮತ್ತು ಕನ್ನಡ ಭಾಷೆಯಲ್ಲಿ ರಿವಾಯತ್ ಪದಗಳ ಪ್ರದರ್ಶನ ನಡೆದವು.
ಹಿರಿಯರಾದ ರಫೀಕ್ ಹನಗಂಡಿ, ಸಲಿಂ ಹನಗಂಡಿ, ಬಾಬುಲಾಲ್ ಹನಗಂಡಿ, ಸಲಿಂ ಮುಜಾವರ, ಸಾಧಿಕ್ ಮುಜಾವರ, ಹನ್ೀ ಹನಗಂಡಿ ರಿವಾಯತ್ ಪದಗಳನ್ನು ಹಾಡಿದರು.
ನೂರಾರು ಜನ ಹಿಂದುಗಳು ಸೇರಿ ಮುಸ್ಲಿಂ ಬಾಂಧವರು ರಿವಾಯತ್ ಪದಗಳನ್ನು ಆಲಿಸಿದರು.