ಜಿಲ್ಲೆ

ನೃತ್ಯ, ತಾಳವಾದ್ಯ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿ

ಜಿ.ಹೆಚ್. ಧನ್ಯಕುಮಾರ್

ಬಾಳೆಹೊನ್ನೂರು: ಮೈಸೂರಿನ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವ ವಿದ್ಯಾನಿಲಯ, ಇತ್ತೀಚಿಗೆ ನಡೆಸಿದ ವಿಶೇಷ ಸಂಗೀತ, ನೃತ್ಯ ಮತ್ತು ತಾಳವಾದ್ಯ ಪರೀಕ್ಷೆಯಲ್ಲಿ ಸಂಗಮೇಶ್ವರಪೇಟೆ ಭಗವತಿಪುರದ ಶ್ರೀವಾಣಿ ನಾಟ್ಯ ಕಲಾ ಕೇಂದ್ರದ ವಿದ್ಯಾರ್ಥಿನಿಯರು ಭರತನಾಟ್ಯ ಜ್ಯೂನಿಯರ್ ವಿಭಾಗದಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೆರ್ಗಡೆಯಾಗಿದ್ದಾರೆ ಎಂದು ಸಂಸ್ಥೆ ನಿರ್ದೇಶಕಿ ವಿದುಷಿ ನಯನ ಶ್ರೀಪ್ರಸಾದ್ ತಿಳಿಸಿದ್ದಾರೆ.

ದೇವನಿ ಪೃಥ್ವಿರಾಜ್ ಶೇ.93, ವೈ.ಆರ್.ಡಿಂಪಲ್, ಶೇ.85, ನಮನ ಶಾಸಿ ಶೇ.88, ಪೂರ್ವಿ ನಾಡಿಗ್, ಶೇ.95, ಎ.ಆರ್.ಸಾನ್ವಿಕಾ ಶೇ.94 ಅಂಕ ಪಡೆದು ಸಂಸ್ಥೆಯ ಕೀರ್ತಿ ಹೆಚ್ಚಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲಾ ಮಟ್ಟದ ಕಲೋತ್ಸವದಲ್ಲಿ ನಮನ ಶಾಸಿ ಭರತನಾಟ್ಯ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ.

ಭಾರತೀಯ ಶಾಸೀಯ ಕಲೆಗಳನ್ನು ಉಳಿಸಿ ಬೆಳೆಸುವಲ್ಲಿ ಇಂದಿನ ವಿದ್ಯಾರ್ಥಿಗಳು ಮುಖ್ಯ ಪಾತ್ರವಹಿಸುತ್ತಾರೆ. ಅವರು ಸರಿಯಾದ ಮಾರ್ಗದಲ್ಲಿ ತರಬೇತಿ ಪಡೆದು ಶಾಸೀಯ ಕಲೆಗಳ ಅಧ್ಯಯನ ಮಾಡಿದರೆ ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿಯ ಮುಖ್ಯವಾಹಕರಾಗಲು ಸಾಧ್ಯ ಎಂದರು.