ಬನ್ನೂರು: ಪಟ್ಟಣದ ನಿವಾಸಿ ಎಸ್.ಗಂಗಾಧರ ಮತ್ತು ಶಶಿಕಲಾ ಅವರ ಪುತ್ರಿ ಜಿ.ಅಮೃತಾ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.91 ಅಂಕ ಪಡೆದಿದ್ದಾರೆ. ಮೈಸೂರಿನ ಸದ್ವಿದ್ಯಾ ಪ್ರೌಢಶಾಲೆಯ ವಿದ್ಯಾರ್ಥಿನಿ ಜಿ.ಅಮೃತಾ ದ್ವಿತೀಯ ಪಿಯುಸಿ ಪರೀಕ್ಷೆಯ ಕನ್ನಡ ವಿಷಯದಲ್ಲಿ 97, ಇಂಗ್ಲಿಷ್ 92, ಭೌತಶಾಸ್ತ್ರ 95, ರಸಾಯನಶಾಸ್ತ್ರ 84, ಗಣಿತ 82 ಹಾಗೂ ಜೀವಶಾಸ್ತ್ರದಲ್ಲಿ 96 ಅಂಕ ಪಡೆಯುವ ಮೂಲಕ 546 ಅಂಕ ಗಳಿಸಿ ಅತ್ಯುನ್ನತ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.