ಕನಕಗಿರಿಯ ಪಂಪಣ್ಣ ಶರಣಪ್ಪ ಗುಗ್ಗಳಶೆಟ್ರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಪುನಶ್ಚೇತನ ಕಾರ್ಯಕ್ರಮವನ್ನು ಪ್ರಾಚಾರ್ಯ ಭಜರಂಗಬಲಿ ಉದ್ಘಾಟಿಸಿದರು. ಸಹಾಯಕ ಪ್ರಾಧ್ಯಾಪಕರಾದ ತಬಸ್ಸುಮ್ ಆರಾ, ಡಾ.ಆಶಿಕಾ, ಲಲಿತಾ ಇತರರಿದ್ದರು. 
ಜಿಲ್ಲೆ

ಉನ್ನತ ಸಾಧನೆಗೆ ಶಿಕ್ಷಣ ಮೂಲ ಅಸ್ತ್ರ

Gangavati - Desk - Veeresh S Ullagaddi

ಕನಕಗಿರಿ: ವಿದ್ಯಾರ್ಥಿಗಳು ಭವಿಷ್ಯದ ಜೀವನ ರೂಪಿಸಿಕೊಳ್ಳುವುದಕ್ಕೆ ಪದವಿ ಹಂತದಲ್ಲಿಯೇ ಕಠಿಣ ಅಭ್ಯಾಸ ಮಾಡಬೇಕು ಎಂದು ಪ್ರಾಚಾರ್ಯ ಭಜರಂಗಬಲಿ ಹೇಳಿದರು.


ಪಟ್ಟಣದ ಪಂಪಣ್ಣ ಶರಣಪ್ಪ ಗುಗ್ಗಳಶೆಟ್ರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿ.ಎ ಮತ್ತು ಬಿ.ಕಾಂ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪುನಶ್ಚೇತನ ಕಾರ್ಯಕ್ರಮ ಉದ್ಘಾಟಿಸಿ ಶುಕ್ರವಾರ ಮಾತನಾಡಿದರು. ಕಾಲೇಜಿನಲ್ಲಿ ವಿವಿಧ ಸಮಿತಿ ಮತ್ತು ಅದರ ಕಾರ್ಯಕ್ರಮಗಳು ಯಾವಾಗಲೂ ವಿದ್ಯಾರ್ಥಿಗಳ ಪರವಾಗಿ ಇರುತ್ತವೆ. ಪ್ರಾಧ್ಯಾಪಕರ ಮಾರ್ಗದರ್ಶನ ಪಡೆದು ಉತ್ತಮ ಅಭ್ಯಾಸ ಮಾಡಿ ಯಶಸ್ವಿ ವ್ಯಕ್ತಿಯಾಗಬೇಕು ಎಂದರು.


ಪ್ರಾಧ್ಯಾಪಕ ಮರ್ವಿನ್ ಡಿಸೋಜ ಮಾತನಾಡಿ, ವಿದ್ಯಾರ್ಥಿಗಳಿಗೆ ಪದವಿ ಹಂತ ಪ್ರಮುಖ ಕಾಲಘಟ್ಟವಾಗಿದೆ. ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಶ್ರದ್ಧೆಯಿಂದ ಭಾಗವಹಿಸಬೇಕು ಎಂದು ತಿಳಿಸಿದರು. ಸಹಾಯಕ ಪ್ರಾಧ್ಯಾಪಕರಾದ ತಬಸ್ಸುಮ್ ಆರಾ, ಡಾ.ಆಶಿಕಾ, ಲಲಿತಾ, ಡಾ. ವೀರೇಶ, ನಾಗರ್ಜುನ, ಶಶಿಕಲಾ, ಬಸಮ್ಮ ಇತರರಿದ್ದರು.