ಕಡೂರಿನ ಪದವಿ ಪೂರ್ವ ಕಾಲೇಜಿನಲ್ಲಿ 1.25 ಕೋಟಿ ರೂ. ವೆಚ್ಚದಲ್ಲಿ ಹೆಚ್ಚುವರಿ ಕೊಠಡಿಗಳ
ನಿರ್ಮಾಣಕ್ಕೆ ಶಾಸಕ ಕೆ.ಎಸ್.ಆನಂದ್ ಭೂಮಿಪೂಜೆ ನೆರವೇರಿಸಿದರು. ಭಂಡಾರಿ
ಶ್ರೀನಿವಾಸ್, ತೋಟದಮನೆ ಮೋಹನ್ ಕುಮಾರ್, ಎಇಇ ಬಸವರಾಜ್ ಮತ್ತಿತರಿದ್ದರು.
- ಕಡೂರು: ಪಟ್ಟಣದ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ 1.25 ಕೋಟಿ ರೂ. ವೆಚ್ಚದಲ್ಲಿ
- ಹೆಚ್ಚುವರಿ ಕೊಠಡಿಗಳ ನಿರ್ಮಾಣದ ಕಾಮಗಾರಿಗೆ ಶಾಸಕ ಕೆ.ಎಸ್.ಆನಂದ್ ಭೂಮಿ ಪೂಜೆ
- ನೆರವೇರಿಸಿದರು.
ನಂತರ ಮಾತನಾಡಿದ ಅವರು, ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ
- ಕಾಲೇಜಿನ ವಿದ್ಯಾರ್ಥಿಗಳ ಸಹಕಾರಿಯಾಗಲೆಂದು ಕೊಠಡಿಗಳ ನಿರ್ಮಾಣ ಕಾರ್ಯವನ್ನು
- ಕೈಗೊಳ್ಳಲಾಗಿದ್ದು, ಮುಂದಿನ ದಿನಗಳಲ್ಲಿ ಹೈಟೆಕ್ ಶೌಚಗೃಹ ನಿರ್ಮಾಣ ಕಾರ್ಯ
- ನೆರವೇರಿಸಲಾಗುತ್ತದೆ ಎಂದರು.
ಜಿಪಂ ಕಚೇರಿ ಸಮೀಪ ಇರುವ ಪಶುಆಸ್ಪತ್ರೆ ವಿಸ್ತರಣಾ ಘಟಕದ ಕೇಂದ್ರ ಪ್ರಾರಂಭಕ್ಕೆ
- ಶಾಸಕ ಕೆ.ಎಸ್.ಆನಂದ್ ಚಾಲನೆ ನೀಡಿದರು. ಪುರಸಭೆ ಸದಸ್ಯರಾದ ಭಂಡಾರಿ
- ಶ್ರೀನಿವಾಸ್, ತೋಟದಮನೆ ಮೋಹನ್‌ಕುಮಾರ್, ಕಾಲೇಜು ಪ್ರಾಚಾರ್ಯ ಡಾ. ತವರಾಜ್,
- ಎಇಇ ಬಸವರಾಜ್, ಜೆಇ ಗಿರೀಶ್, ಕಂಸಾಗರ ಶೇಖರ್, ಪಶು ಸಹಾಯಕ ನಿರ್ದೇಶಕ
- ಡಾ.ಉಮೇಶ್, ಮುಖಂಡರಾದ ಕಾಂತರಾಜ್, ಅಶೋಕ್, ಚೌಳಹಿರಿಯೂರು ಪ್ರಕಾಶ್,
- ರಂಗನಾಥ್ ಮತ್ತಿತರಿದ್ದರು.