ದಾವಣಗೆರೆ: ಸ್ವಾತಂತ್ರೃ ದಿನಾಚರಣೆ ಪ್ರಯುಕ್ತ ನಗರದ ರೋಟರಿ ಬಾಲಭವನದಲ್ಲಿ ಆ.18 ರಂದು ಪ್ರೌಢಶಾಲಾ ಮಕ್ಕಳಿಗೆ ಸ್ವಾತಂತ್ರೃ ಹೋರಾಟಗಾರರ ಕುರಿತು ಕಿರುನಾಟಕ ಸ್ಪರ್ಧೆ-2024 ಏರ್ಪಡಿಸಲಾಗಿದೆ.
ರೋಟರಿ ಕ್ಲಬ್ ದಾವಣಗೆರೆ ದಕ್ಷಿಣ ಹಾಗೂ ರಂಗನಿಕೇತನ ಕಲಾ ತಂಡ ಇವರ ಸಹಯೋಗದಲ್ಲಿ ಭಾನುವಾರ ಬೆಳಗ್ಗೆ 9.30 ರಿಂದ ಸಂಜೆವರೆಗೆ ಸ್ಪರ್ಧೆ ನಡೆಯಲಿದೆ ಎಂದು ರೋಟರಿ ಕ್ಲಬ್ ಅಧ್ಯಕ್ಷ ಕಿಶನ್ ತಿಳಿಸಿದ್ದಾರೆ.
ಸ್ಪರ್ಧೆಗೆ 8 ರಿಂದ 10 ನೇ ತರಗತಿ ಒಳಗಿನ ಮಕ್ಕಳಿಗೆ ಮಾತ್ರ ಅವಕಾಶವಿದೆ. ನಾಟಕದ ಅವಧಿ 15 ನಿಮಿಷಗಳಾಗಿರುತ್ತದೆ. ಒಂದು ತಂಡದಲ್ಲಿ 5 ರಿಂದ 10 ವಿದ್ಯಾರ್ಥಿಗಳು ಭಾಗವಹಿಸಬಹುದು. ನಾಟಕಕ್ಕೆ ಬೇಕಾದ ಉಪಕರಣ ಮತ್ತು ವಸ್ತುಗಳನ್ನು ಪಾಲ್ಗೊಳ್ಳುವವರೇ ತರಬೇಕು. ಒಂದು ಶಾಲೆಯಿಂದ ಒಂದು ತಂಡಕ್ಕೆ ಮಾತ್ರ ಅವಕಾಶವಿದ್ದು, ನಿರ್ಣಾಯಕರ ನಿರ್ಧಾರವೇ ಅಂತಿಮವಾಗಿದೆ.
ಭಾಗವಹಿಸಿದ ಎಲ್ಲ ತಂಡಗಳಿಗೆ ಪ್ರಮಾಣಪತ್ರ ಹಾಗೂ ವಿಜೇತ ತಂಡಗಳಿಗೆ ಪ್ರಶಸ್ತಿ ನೀಡಲಾಗುವುದು. ಮಾಹಿತಿಗಾಗಿ ಶ್ರೀಧರ, ಮೊ: 8880950372 ಸಂಪರ್ಕಿಸಬಹುದು ಎಂದು ಕೋರಿದ್ದಾರೆ.