ಜಿಲ್ಲೆ

ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ

ಜಿ.ಹೆಚ್. ಧನ್ಯಕುಮಾರ್

ಕಡೂರು: ತಾಲೂಕನ್ನು ಶೈಕ್ಷಣಿಕವಾಗಿ ಅಭಿವೃದ್ದಿಗೊಳಿಸುವುದು ನನ್ನ ಮುಖ್ಯಗುರಿ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

ಚೌಳಹಿರಿಯೂರಿನ ಜಮ್ಮಾಪುರ ಸಮೀಪ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, 22 ಕೋಟಿ ರೂ. ವೆಚ್ಚದಲ್ಲಿ ಚೌಳಹಿರಿಯೂರಿನ ಅಂಬೇಡ್ಕರ್ ವಸತಿ ಶಾಲಾ ಕಟ್ಟಡಕ್ಕೆ ಚಾಲನೆ ನೀಡಲಾಗಿದೆ. ಇದರಿಂದ ಚೌಳಹಿರಿಯೂರು, ಯಗಟಿ, ಅಜ್ಜಂಪುರ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಯಗಟಿ ಮೂರಾರ್ಜಿ ವಸತಿ ಶಾಲೆಗೆ 22 ಕೋಟಿ ರೂ., ಗೆದ್ಲೆಹಳ್ಳಿ ವಸತಿ ಕಾಲೇಜು ಕಟ್ಟಡಕ್ಕೆ 22 ಕೋಟಿ ರೂ. ಮಂಜೂರಾಗಿದೆ ಎಂದರು.

ಕೆಡಿಪಿ ಸದಸ್ಯ ಗುಮ್ಮನಹಳ್ಳಿ ಅಶೋಕ್ ಮಾತನಾಡಿ, ವಸತಿ ಶಾಲೆ ಆರಂಭವಾಗಿ ಆರು ವರ್ಷವಾದರೂ ಸ್ವಂತ ಕಟ್ಟಡವಿಲ್ಲದ್ದು ದೊಡ್ಡ ಕೊರತೆಯಾಗಿತ್ತು. ಇದೀಗ ಸ್ವಂತ ಕಟ್ಟಡ ಕಾಮಗಾರಿಗೆ ಚಾಲನೆ ದೊರೆತಿದೆ. ಶಾಲೆ ದೊಡ್ಡ ವಿದ್ಯಾಕೇಂದ್ರವಾಗಿ ಖ್ಯಾತಿ ಪಡೆಯಲಿ ಎಂದರು. ಗ್ರಾಪಂ ಉಪಾಧ್ಯಕ್ಷ ಮೂರ್ತಪ್ಪ, ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಉಪ ನಿರ್ದೇಶಕಿ ಮಾಲತಿ, ಎಸ್‌ಡಿಎಂಸಿ ಅಧ್ಯಕ್ಷ ಚೌಳಹಿರಿಯೂರು ಕೃಷ್ಣಮೂರ್ತಿ, ಗ್ರಾಪಂ ಸದಸ್ಯರಾದ ಅನಿತಾ ಮಲ್ಲೇಶಪ್ಪ, ರೇವಣ್ಣ, ಪ್ರಭು, ಪಿಎಸೈ ಮಂಜುನಾಥ್, ಚೌಳಹಿರಿಯೂರು ಪ್ರಕಾಶ್ ವಸತಿ ಶಾಲೆ ಪ್ರಾಚಾರ್ಯ ಧನರಾಜ್, ಗಿರೀಶ್, ಗುತ್ತಿಗೆದಾರ ರವಿಶಂಕರ್, ಅಜ್ಜಯ್ಯ, ಪ್ರಭು, ಶ್ರೀಕಂಠಒಡೆಯರ್, ಎಇ ಮಂಜುನಾಥ್, ಹರಿರಾಮ್ ಇದ್ದರು.