ಜಿಲ್ಲೆ

ಗ್ರಾಮೀಣ ಭಾಗದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ

ಜಿ.ಹೆಚ್. ಧನ್ಯಕುಮಾರ್

ಬೀರೂರು: ಅಭಿವೃದ್ಧಿ ಸದಾ ಕಾರ್ಯ ರೂಪದಲ್ಲಿದ್ದಾಗ ಮಾತ್ರ ಪ್ರತಿ ಹಳ್ಳಿಗಳು ಪ್ರಗತಿಯತ್ತ ಹೆಜ್ಜೆ ಇಡಲು ಸಾಧ್ಯ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.
ಜೋಡಿ ತಿಮ್ಮಾಪುರದಲ್ಲಿ ಪಂಚಾಯಿತಿ ಕಚೇರಿ, ಅಂಗನವಾಡಿ ಹಾಗೂ ಕಾರೇಹಳ್ಳಿ ಗ್ರಾಮದಲ್ಲಿ ಅಂಗನವಾಡಿ ಕೇಂದ್ರ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರದ ಗ್ಯಾರಂಟಿ ಯೋಜನೆ ನೀಡಿದರೆ ರಾಜ್ಯ ದಿವಾಳಿಯಾಗುತ್ತದೆ ಎನ್ನುವ ವಿರೋಧ ಪಕ್ಷಗಳ ಮಾತನ್ನು ಸುಳ್ಳು ಮಾಡಿ ರಸ್ತೆ, ಕುಡಿಯುವ ನೀರು, ಚರಂಡಿ ಸೇರಿದಂತೆ ವಿವಿಧ ಮೂಲ ಸೌಲಭ್ಯಗಳನ್ನು ಒದಗಿಸಲು ಈ ಪಂಚಾಯಿತಿ ವ್ಯಾಪ್ತಿಗೆ 1.28 ಕೋಟಿ ರೂ.ಅನುದಾನ ನೀಡಲಾಗಿದೆ ಎಂದರು.
ಜಿಪಂ ಮಾಜಿ ಸದಸ್ಯ ಶರತ್ ಕೃಷ್ಣಮೂರ್ತಿ ಮಾತನಾಡಿ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಮೀಸಲಾತಿಗೆ ತೆಲುಗುಗೌಡ ಸಮಾಜ ಸತತ ಹೋರಾಟಗಳನ್ನು ಮಾಡುತ್ತಿದೆ. ಸರ್ಕಾರದ ಯೋಜನೆಗಳನ್ನು ತಲುಪಿಸುವ ಸಲುವಾಗಿ ಪಂಚಾಯಿತಿಗಳು ಬದ್ಧವಾಗಿವೆ ಎಂದರು.
ಗಾಳೀಹಳ್ಳಿ ಗ್ರಾಪಂ ಸದಸ್ಯ ಆನಂದ್, ತಾಪಂ ಮಾಜಿ ಸದಸ್ಯ ಗೋವಿಂದಸ್ವಾಮಿ, ಬೀರೂರು ಪುರಸಭೆ ಸದಸ್ಯ ಬಿ.ಕೆ.ಶಶಿಧರ್, ಜೋಡಿ ತಿಮ್ಮಾಪುರ ಗ್ರಾಪಂ ಸದಸ್ಯ ವೆಂಕಟೇಶ್, ಗ್ರಾಪಂ ಅಧ್ಯಕ್ಷೆ ಶಾಂತಮ್ಮ, ಉಪಾಧ್ಯಕ್ಷೆ ನೀಲಮ್ಮ, ಸದಸ್ಯರಾದ ಗೌರಮ್ಮ, ಬಸಮ್ಮ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಶಿವಪ್ರಕಾಶ್, ಪಿಡಿಒ ದಯಾನಂದ್, ಬಗರ್ ಹುಕುಂ ಸಮಿತಿ ಸದಸ್ಯ ಶಶಿ, ಮುಖಂಡರಾದ ಎಲ್.ಟಿ.ಹನುಮಂತಪ್ಪ, ನರಸಿಂಹ ಮೂರ್ತಿ, ಬಸವರಾಜು, ವಿನಾಯಕ, ಆರ್ೀ ಇದ್ದರು.