ಬೆಂಗಳೂರು: ಹೈಕೋರ್ಟ್ನ ಬೆಂಗಳೂರು ಪ್ರಧಾನ ಪೀಠ ಹಾಗೂ ಧಾರವಾಡ ಮತ್ತು ಕಲಬುರಗಿ ಪೀಠಗಳಿಗೆ ಆ.29ರಂದು ರಜೆ ಘೋಷಿಸಲಾಗಿದೆ.
ಹೈಕೋರ್ಟ್ ಪ್ರಭಾರಿ ರಿಜಿಸ್ಟ್ರಾರ್ ಜನರಲ್ ಬಿ. ಮುರಳೀದರ ಪೈ ಈ ಕುರಿತು ಅಧಿಸೂಚನೆ ಹೊರಡಿಸಿದ್ದಾರೆ. ಆ.29ರ ರಜೆಯ ಬದಲಿಗೆ ಅ.15ರಂದು ಕೆಲಸದ ದಿನ ಎಂದು ಘೋಷಿಸಲಾಗಿದ್ದು, ಅಂದು ಮೂರೂ ಪೀಠಗಳಲ್ಲಿ ಕಲಾಪ ನಡೆಯಲಿದೆ ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.