ನಂಜನಗೂಡು ತಾಲೂಕಿನ ದೇವನೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೈಟೆಕ್ ಶೌಚಗೃಹವನ್ನು ಮಂಜು ಉದ್ಘಾಟಿಸಿದರು. ಶಶಿಕಲಾ ನಾಗೇಂದ್ರ, ಡಾ.ಸುಧೀಂದ್ರ, ಅವಿನಾಶ್, ಪದ್ಮಾ, ಮಂಜುಳಾ, ಶಶಿಕಾಂತ್, ಮಹದೇವಸ್ವಾಮಿ, ಮಹದೇವಪ್ರಸಾದ್ ಇದ್ದರು. 
ಜಿಲ್ಲೆ

ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೈಟೆಕ್ ಶೌಚಗೃಹ ಉದ್ಘಾಟನೆ

ನಂಜನಗೂಡು: ತಾಲೂಕಿನ ದೇವನೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನೂತನವಾಗಿ ನಿರ್ಮಿಸಿರುವ ಹೈಟೆಕ್ ಶೌಚಗೃಹವನ್ನು ದೇವನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜು ಗುರುವಾರ ಉದ್ಘಾಟಿಸಿದರು.

ಶ್ರೀನಿವಾಸ್ ಸರ್ವೀಸಸ್ ಟ್ರಸ್ಟ್ ಮತ್ತು ಟಿವಿಎಸ್ ಕಂಪನಿ ವತಿಯಿಂದ ಸುಮಾರು 7.90 ಲಕ್ಷ ರೂ. ವೆಚ್ಚದಲ್ಲಿ ಹೈಟೆಕ್ ಶೌಚಗೃಹ ನಿರ್ಮಾಣ ಮಾಡಲಾಗಿದ್ದು, ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ಕಟ್ಟಡಗಳಿವೆೆ. ಆಸ್ಪತ್ರೆಗೆ ಆಗಮಿಸುವ ಒಳ ಮತ್ತು ಹೊರ ರೋಗಿಗಳು, ಅಂಗವಿಕಲರು, ಸಿಬ್ಬಂದಿಗೆ ಅನುಕೂಲವಾಗುವಂತೆ ಸುಸಜ್ಜಿತವಾಗಿ ನಿರ್ಮಿಸಲಾಗಿದೆ. ರೋಗಿಗಳು ಇದರ ಸದುಪಯೋಗ ಪಡೆಯಬೇಕು. ಟಿವಿಎಸ್ ಕಂಪನಿ ಸರ್ಕಾರಿ ಶಾಲೆ ಮತ್ತು ಆಸ್ಪತ್ರೆ ಹಾಗೂ ಅಂಗನವಾಡಿ ಕೇಂದ್ರಗಳ ಅಭಿವೃದ್ಧಿಗೆ ಸಾಕಷ್ಟು ಅನುದಾನವನ್ನು ನೀಡುತ್ತಿರುವುದು ಶ್ಲಾಘನೀಯ ಎಂದು ಮಂಜು ಹೇಳಿದರು.

ಗ್ರಾಪಂ ಉಪಾಧ್ಯಕ್ಷೆ ಶಶಿಕಲಾ ನಾಗೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸುಧೀಂದ್ರ, ಗ್ರಾಪಂ ಸದಸ್ಯರಾದ ಅವಿನಾಶ್, ಪದ್ಮಾ, ಮಂಜುಳಾ, ಟಿವಿಎಸ್ ಕಂಪನಿಯ ಕ್ಷೇತ್ರ ನಿರ್ದೇಶಕ ಶಶಿಕಾಂತ್, ಸಮುದಾಯ ಅಧಿಕಾರಿಗಳಾದ ಮಹದೇವಸ್ವಾಮಿ, ಮಹದೇವಪ್ರಸಾದ್, ಮುಖಂಡರಾದ ಪ್ರಭುಸ್ವಾಮಿ, ಸೋಮಶೇಖರ್, ದೊಡ್ಡನಾಗಪ್ಪ ಇತರರಿದ್ದರು.