raichur 
ಜಿಲ್ಲೆ

ಬಡ ವಿದ್ಯಾರ್ಥಿಗಳಿಗಾಗಿ ನಿರ್ಮಾಣವಾದ ಹೈಟೆಕ್ ವಸತಿ ನಿಲಯ

ರಾಚಯ್ಯ ಸ್ವಾಮಿ ಮಾಚನೂರು

 ರಾಯಚೂರು ಶೂನ್ಯ ದಾಖಲಾತಿ ಕಾರಣದಿಂದ ಸುಮಾರು ಪ್ರಾಥಮಿಕ ಹಾಗೂ ಮಾಧ್ಯಮಿಕ ಸರ್ಕಾರಿ ಶಾಲೆಗಳು ಮುಚ್ಚುವ ಅಂತದಲ್ಲಿದ್ದರು, ಗ್ರಾಮೀಣ ಮಕ್ಕಳಿಗೆ ಉತ್ತಮವಾದ ಶಿಕ್ಷಣ ನೀಡಲು ರಾಯಚೂರು ತಾಲೂಕಿನ ಹೊರವಲಯದಲ್ಲಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯು ಹೈಟೆಕ್ ಸ್ಪರ್ಶ ಪಡೆದು ಖಾಸಗಿ ಶಾಲೆಗೆ ಸೆಡ್ಡು ಹೊಡೆಯುವಂತೆ ಜಿ¯್ಲÉಯ ಮಾದರಿ ನಿರ್ಮಾಣವಾಗುತ್ತಿದೆ.

ಹಳೆಯ ಸರ್ಕಾರಿ ಶಾಲಾ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದ್ದರಿಂದ ಅಪಾಯಕಾರಿ ಸ್ಥಿತಿಯಲ್ಲಿದ್ದ ಕೊಠಡಿಗಳನ್ನು ನೆಲಸಮಗೊಳಿಸಿ ತಾಲೂಕಿನ ಸಂಕನೂರು ಗ್ರಾಮದ ಹತ್ತಿರ ಆಧುನಿಕ ಸೌಲಭ್ಯಗಳುಳ್ಳ ಸುಸಜ್ಜಿತ ಮಾದರಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕಟ್ಟಡ ನಿರ್ಮಿಸಲಾಗಿದೆ. ನಗರ ಶಾಸಕ ಡಾ.ಶಿವರಾಜ ಪಾಟೀಲ್ ಅವರು ಶಾಲೆಯನ್ನು ಖಾಸಗಿ ಶಾಲೆಯ ಮಟ್ಟಕ್ಕೆ ಕೊಂಡೊಯ್ಯುವ ಶಪಥ ಮಾಡಿದ್ದಾರೆ. ಅದರಂತೆ ವಿವಿಧ ಅನುದಾನಗಳನ್ನು ಬಳಸಿಕೊಂಡು ಸಾ-ï್ಟವೇರï ಕಂಪೆನಿಯ ಮಾದರಿಯಲ್ಲಿ ಭವ್ಯವಾದ ಹೈಟೆಕ್ ಶಾಲೆಯನ್ನು ನಿರ್ಮಿಸಿz್ದÁರೆ.

ಎಷ್ಟು ಅನುದಾನ ಮಂಜೂರು

ಈ ಹಿಂದಿನ ಬಿಜೆಪಿ ಸರ್ಕಾರವಿದ್ದಾಗ ೨೦೨೧-೨೨ ರಲ್ಲಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ನಿರ್ಮಾಣ ಮಾಡಲು ೨೫ ಕೋಟಿ ಅನುದಾನ ಮಂಜೂರು ಮಾಡಿದ ನಂತರ ಕಟ್ಟಡ ನಿರ್ಮಾಣ ಮಾಡಲು ಗೃಹ ಮಂಡಳಿ ಇಲಾಖೆಗೆ ಹಸ್ತಾಂತರ ಮಾಡಿ ನಂತರ ೪ ವರ್ಷದ ನಂತರ ಕಟ್ಟಡ ನಿರ್ಮಾಣವಾಗಿದ್ದು, ಗ್ರಂಥಾಲಯ, ಕಂಪ್ಯೂಟರ್ ಲ್ಯಾಬï, ಶಾಲೆಗೆ ಕಾಂಪೌAಡï ಬರಬೇಕಿದೆ. ಸಭಾಂಗಣ, ರಂಗ ಬಯಲು ಮಂದಿರ ಸಿದ್ಧವಾಗಿದೆ. ಇದೊಂದು ಸುಸಜ್ಜಿತ ಶಾಲೆಯಾಗಿದ್ದು ಜೂನ್ ಅಂತ್ಯದಲ್ಲಿ ಉದ್ಘಾಟನೆಯಾಗುವ ಸಾಧ್ಯತೆ ಇದೆ.

ಶಾಲೆಯ ವಿಶೇಷತೆಗಳು

ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯು ಒಟ್ಟು ೧೬ ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿದ್ದು, ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಸಾ-ï್ಟವೇರï ಕಂಪೆನಿಯ ಮಾದರಿಯಲ್ಲಿ ಪ್ರತ್ಯೆಕವಾಗಿ ವಸತಿ ನಿಲಯಗಳು ಇದ್ದು, ಕಟ್ಟಡದಲ್ಲಿ ೨೫ ಕ್ಕೂ ಅಽಕ ಕೊಠಡಿಗಳನ್ನು ನಿರ್ಮಿಸಲಾಗಿದೆ. ಒಟ್ಟು ೫೦೦ ಕ್ಕೂ ಅಽಕ ಮಕ್ಕಳು ವ್ಯಾಸಂಗ ಮಾಡುತ್ತಿz್ದÁರೆ. ೬ ರಿಂದ ೧೦ನೇ ತನಕ ತರಗತಿಗಳು ನಡೆಯಲಿವೆ. ಶಾಲೆಯಲ್ಲಿ ದಿನದ ೨೪ ಗಂಟೆ ಸಿಸಿಟಿವಿ ಅಳವಡಿಕೆ ಮಾಡಲಾಗಿರುತ್ತದೆ. ಬಯಲು ರಂಗಮAದಿರ, ಸಭಾಂಗಣ, ಕಂಪ್ಯೂಟರ್ ಲ್ಯಾಬï, ಹೈಟೆಕ್ ಲೈಬ್ರರಿ, ಸ್ಮಾರ್ಟ್ ತರಗತಿಗಾಗಿ ಸ್ಮಾರ್ಟ್ ಬೋರ್ಡ್ ಸೌಲಭ್ಯ ಕಲ್ಪಿಸಲಾಗಿದೆ. ಅಲ್ಲದೆ, ಮಕ್ಕಳಿಗೆ ಅತ್ಯವಶ್ಯಕವಾಗಿರುವ ಸುಸಜ್ಜಿತವಾದ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಕೂಡ ಮಾಡಲಾಗಿದೆ.\

ಕಾಂಪೌAಡ್ ನಿರ್ಮಾಣಕ್ಕೆ ತೊಂದರೆ

ಒಟ್ಟು ೧೬ ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕಾಂಪೌಡ್ ನಿರ್ಮಾಣಕ್ಕೆ ಸಂಬAದಿಸಿದAತೆ ಜಾಗದ ವಿಚಾರದಲ್ಲಿ ಕೆಲವರು ತಕಾರಾರು ಮಾಡಿದ್ದು, ಜಿಲ್ಲಾಽಕಾರಿಗಳು ಹಾಗೂ ಸ್ಥಳೀಯ ಶಾಸಕರು ಮದ್ಯಸ್ಥಿಕೆ ವಸಿದರೆ ಶೀಘ್ರದಲ್ಲಿ ಕಾಂಪೌAಡ್ ನಿರ್ಮಾಣವಾಗುತ್ತದೆಂದು ಇಂಜಿಯರ್ ಹೇಳುತ್ತಿದ್ದಾರೆ.

ರಾಯಚೂರು ಹೊರವಲಯದ ಸಂಕನೂರು ಗ್ರಾಮದ ಹತ್ತಿರದಲ್ಲಿ ನೂತನವಾಗಿ ಹೈಟೆಕ್ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ನಿರ್ಮಾಣ ಮಾಡಲಾಗಿದೆ. ನಮ್ಮ ಸರ್ಕಾರದ ಅವಽಯಲ್ಲಿ ಒಟ್ಟು ೨೫ ಕೋಟಿ ರೂ ಅನುದಾನದಲ್ಲಿ ಕಟ್ಟಡ ನಿರ್ಮಾಣ ಮಾಡಲಾಗಿದೆ. ಕಾಂಪೌಡ್ ನಿರ್ಮಾನದ ಕುರಿತು ಸ್ಥಳೀಯ ರೈತರೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸುವೆ. ಡಾ.ಶಿವರಾಜ ಪಾಟೀಲ್ ಶಾಸಕ ರಾಯಚೂರು ನಗರ