ಜಿಲ್ಲೆ

ಹೈಟೆಕ್ ಆಂಗ್ಲ ಮಾಧ್ಯಮ ತರಗತಿ ಉದ್ಘಾಟನೆ

ಇಂದಿರಾ ಎನ್ ಕೆ

ಹೆಬ್ರಿ: ಪಡುಕುಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೈಟೆಕ್ ವಾದರಿಯ ಆಂಗ್ಲ ವಾಧ್ಯಮ ತರಗತಿ ಉದ್ಘಾಟನೆ, ಔಷಧೀಯ ವನ ಲೋಕಾರ್ಪಣೆ, ವಿವಿಧ ಕೊಡುಗೆಗಳ ಹಸ್ತಾಂತರ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ಶಾಲೆ ಮುಖ್ಯಶಿಕ್ಷಕ ಹರೀಶ ಪೂಜಾರಿ ಎಸ್. ವಾತನಾಡಿ ಶಾಲೆ ಅಭಿವೃದ್ಧಿಗೆ ವಿಶೇಷ ಸಹಕಾರ ನೀಡುತ್ತಿರುವ ಮುಂಬೈ ಉದ್ಯಮಿ ಪಡುಪರ್ಕಳ ಹರೀಶ ಶೆಟ್ಟಿ, ಬೆಂಗಳೂರು ರೋಟರಿ ಸಂಸ್ಥೆಯ ಪಡುಕುಡೂರು ಕೃಷ್ಣ ಶೆಟ್ಟಿ ಅವರ ಕೊಡುಗೆಯನ್ನು ಸ್ಮರಿಸಿದರು.

ಶಾಲಾ ಅಭಿವೃದ್ಧಿಗೆ ವಿವಿಧ ಕೊಡುಗೆ ನೀಡಿದ ಜಯಂತಿ ಹೆಗ್ಡೆ, ಸುಕೇಶ ಶೆಟ್ಟಿ, ನಾಗೇಶ ಆಚಾರ್ಯ, ಸುಂದರಿ ಪೂಜಾರಿ, ಯಶ್ ಅಜಿಲ ಮುನಿಯಾಲು, ರಿತೇಶ ಶೆಟ್ಟಿ ಖಜಾನೆ, ಅಡುಗೆ ಸಹಾಯಕಿ ಪುಷ್ಪಾ, ಪ್ರಸನ್ನ ಶೆಟ್ಟಿ ಜಯಲೀಲಾ, ರವಿ ಶೆಟ್ಟಿ, ಹರೀಶ ಪೂಜಾರಿ, ಸುನೀಲ್ ಹಿರಿಯಡ್ಕ, ವಿವಿಧ ಸಂಸಂಸ್ಥೆಯ ಪ್ರಮುಖರನ್ನು, ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಶ್ರೀ ಮಹಾಗಣಪತಿ ಮಹಿಳಾ ಸಂದ ಸದಸ್ಯರು ಸಹಿತ ಹಲವರನ್ನು ಗೌರವಿಸಲಾಯಿತು.

ಪಡುಕುಡೂರು ಎಂ.ಡಿ.ಅಧಿಕಾರಿ ಯೂತ್ ಕ್ಲಬ್ ಗೌರವಾಧ್ಯಕ್ಷ ಪಡುಪರ್ಕಳ ಹರೀಶ ಶೆಟ್ಟಿ, ಅಧ್ಯಕ್ಷ ಸಂದೀಪ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರವಿ ಶೆಟ್ಟಿ, ಮುಖ್ಯಶಿಕ್ಷಕ ಹರೀಶ ಪೂಜಾರಿ ಎಸ್., ಮುನಿಯಾಲು ಲಯನ್ಸ್ ಕ್ಲಬ್ ಪೂರ್ವಾಧ್ಯಕ್ಷ ಟಿ.ಭುಜಂಗ ಶೆಟ್ಟಿ, ಪ್ರಮುಖರಾದ ಸಂದೇಶ ಶೆಟ್ಟಿ, ಶಂಕರ ಶೆಟ್ಟಿ, ಪಡುಪರ್ಕಳ ಶಂಕರ ಶೆಟ್ಟಿ, ಡಾ.ಕೆ.ಸುದರ್ಶನ್ ಹೆಬ್ಬಾರ್, ಜಗದೀಶ ಹೆಗ್ಡೆ, ಪ್ರಸನ್ನ ಶೆಟ್ಟಿ ಜಯಲೀಲಾ, ಅಶೋಕ್ ಎಂ.ಶೆಟ್ಟಿ, ಸೀತಾರಾಮ ಕಡಂಬ, ತಾರಾವತಿ ಶೆಟ್ಟಿ, ಸುಮಲತಾ, ಸವಿತಾ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಶಿಕ್ಷಕಿಯರು, ಪಡುಕುಡೂರು ಎಂ.ಡಿ.ಅಧಿಕಾರಿ ಯೂತ್ ಕ್ಲಬ್ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಹರೀಶ ಪೂಜಾರಿ ಎಸ್. ಸ್ವಾಗತಿಸಿದರು.