ಜಿಲ್ಲೆ

ಜೋರು ಮಳೆಗೂ ಮುಂಚೆ ಹೆಸ್ಕಾಂಗೆ 33.81 ಕೋಟಿ ರೂ.ಹಾನಿ

ಕಾರವಾರ : ಗಾಳಿ ಮಳೆಯಿಂದ ಕಳೆದ ಎರಡುವರೆ ತಿಂಗಳಲ್ಲಿ ಹೆಸ್ಕಾಂಗೆ 33.81 ಕೋಟಿ ರೂ. ನಷ್ಟವಾಗಿದೆ ಎಂದು ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮೊಹಮದ್ ರೋಶನ್ ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಏಪ್ರಿಲ್ 1 ರಿಂದ ಜೂನ್ 17 ರವರೆಗೆ 15.59 ಕೋಟಿ ರೂ.ಮೌಲ್ಯದ 1,216 ಟಿಸಿಗಳಿಗೆ ಹಾನಿಯಾಗಿದೆ 17.02 ಕೋಟಿ ರೂ. ಮೌಲ್ಯದ 10,448 ಕಂಬಗಳು ಉರುಳಿ ಬಿದ್ದಿವೆ. 99.47 ಲಕ್ಷ ರೂ. ಮೌಲ್ಯದ 94.47 ವಿದ್ಯುತ್ ತಂತಿ ಹಾಳಾಗಿದೆ. ಇದುವರೆಗೆ 10076 ಕಂಬಗಳನ್ನು ಮರುಸ್ಥಾಪಿಸಲಾಗಿದೆ. ಉಳಿದ 372 ಕಂಬಗಳದುರಸ್ತಿಕಾರ್ಯನಡೆದಿದೆ. 2 ಪರಿವರ್ತಕಗಳ ದುರಸ್ತಿ ಕಾರ್ಯ ನಡೆದಿದೆ. ಬೆಳಗಾವಿ ಜಿಲ್ಲೆಯಲ್ಲಿ 8.78 ಕೋಟಿ ರೂ., ಧಾರವಾಡ-5.04, ವಿಜಯಪುರ-4.93, ಬಾಗಲಕೋಟೆ -5.54, ಉತ್ತರಕನ್ನಡ-5.05, ಹಾವೇರಿ-2.88, ಗದಗ-1.55 ಕೋಟಿ ರೂ. ಹಾನಿಯಾಗಿದೆ ಎಂದು ಅವರು ಎಂದು ಮಾಹಿತಿ ನೀಡಿದ್ದಾರೆ.