ಯಲ್ಲಾಪುರ: ತಾಲೂಕಿನ ಉಚಗೇರಿಯ ರಾಜೀವಾಡ ಗ್ರಾಮದಲ್ಲಿ ಮಳೆ-ಗಾಳಿಯಿಂದಾಗಿ ಕಳೆದ ಒಂದು ವಾರದಿಂದ ವಿದ್ಯುತ್ ವ್ಯತ್ಯಯ ಉಂಟಾಗಿದ್ದು, ಗುರುವಾರ ಮಧ್ಯರಾತ್ರಿಯವರೆಗೂ ಶ್ರಮಿಸಿ ಹೆಸ್ಕಾಂ ಸಿಬ್ಬಂದಿ ವಿದ್ಯುತ್ ಸಂಪರ್ಕ ಕಲ್ಪಿಸಿ ಮಾದರಿಯಾದರು.
ಗಾಳಿ ಮಳೆಯಿಂದ ಮರಗಳು ಬಿದ್ದು ವಿದ್ಯುತ್ ಕಂಬ ಮುರಿದು, ತಂತಿಗಳು ಹರಿದು ಸಂಪರ್ಕ ಕಡಿತಗೊಂಡಿತ್ತು. ಗ್ರಾಮಸ್ಥರು ಕತ್ತಲೆಯಲ್ಲಿ ಕಾಲ ಕಳೆಯುವಂತಾಗಿತ್ತು.
ಹೆಸ್ಕಾಂನ ಧರ್ಮರಾಜ ಬೆಡಸಗಾವ, ಆಶಿ ಪೋತಿಕೇರಿ, ಪ್ರವೀಣ ಬಾಪೂಜಿ ಮೂಡಸಾಲಿ ನೇತೃತ್ವದಲ್ಲಿ ಮಳೆ- ಗಾಳಿಯ ನಡುವೆಯೂ ಗುರುವಾರ ಸಂಜೆಯಿಂದ ರಾತ್ರಿಯವರೆಗೆ ಶ್ರಮಿಸಿದ ಹೆಸ್ಕಾಂ ಸಿಬ್ಬಂದಿ ವಿದ್ಯುತ್ ಸಂಪರ್ಕ ಕಲ್ಪಿಸುವಲ್ಲಿ ಯಶಸ್ವಿಯಾದರು.
ದಲಿತ ಸಂಘರ್ಷ ಸಮಿತಿಯ ಚಂದ್ರಕಾಂತ ಕಾದ್ರೊಳ್ಳಿ ಬಣದ ತಾಲೂಕು ಅಧ್ಯಕ್ಷ ಮಂಜುನಾಥ ನೇರಲಗಿ, ದತ್ತಾತ್ರೇಯ ಹೆಗಡೆ ಹಾಗೂ ಸ್ಥಳೀಯರು ಸಹಕರಿಸಿದರು.