ಸವಣೂರ: ಹೆಸ್ಕಾಂ ಇಲಾಖೆ ಅಧಿಕಾರಿಗಳೊಂದಿಗೆ ಲೈನ್‌ಮನ್ ಸೇರಿದಂತೆ ಕುಟುಂಬಸ್ಥರಿಗಾಗಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಂಡಿರುವುದು ಶ್ಲಾಘನೀಯ ಕಾರ್ಯ ಎಂದು ತಾಲೂಕು ಸಾರ್ವಜನಿಕ ವೈದ್ಯಾಧಿಕಾರಿ ಡಾ. ಶಂಕರಗೌಡ ಹಿರೇಗೌಡ್ರ ತಿಳಿಸಿದರು.
ಪಟ್ಟಣದ ಹೆಸ್ಕಾಂ ಇಲಾಖೆಯ ಆವರಣದಲ್ಲಿ ಜೆಸಿಐ ನಮ್ಮ ಸವಣೂರು ಘಟಕ ಶನಿವಾರ ಏರ್ಪಡಿಸಿದ್ದ ಜೆಸಿಐ ಸಪ್ತಾಹ ಉದ್ಘಾಟನೆ ಹಾಗೂ ಮೊದಲ ದಿನದ ಉಚಿತ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು. ಸಪ್ತಾಹದ ಅಂಗವಾಗಿ 6 ದಿನ ನಿತ್ಯ ವಿವಿಧ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಿರುವುದು ಒಳ್ಳೆಯದು ಎಂದರು.
ಜೆಸಿಐ ತರಬೇತಿದಾರ, ಶಿಕ್ಷಕ ವಿದ್ಯಾಧರ ಕುತನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜೆಸಿಐ ನಮ್ಮ ಸವಣೂರು ಘಟಕದ ಉಪಾಧ್ಯಕ್ಷ ದೇವರಾಜ ಅವರೆಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಿಬಿರದಲ್ಲಿ ವೈದ್ಯರಾದ ಡಾ. ಪ್ರಶಾಂತ ಕೋರಿ, ಡಾ. ವೀಣಾ ಕುಂಚಗೇರಿ, ಡಾ. ಪವನಕುಮಾರ ಮಾಳೋದೆ, ಮಹಾಂತೇಶ ಹೊಳೆಯಮ್ಮನವರ, ನೇತ್ರಾವತಿ ಬಿ., ಮೀನಾಜ್ ಎಂ., ಜ್ಞಾನೇಶ್ವರಿ ಬಿ.ಕೆ., ಮುತ್ತೇಶ ಭೋವಿ ಹಾಗೂ ತಂಡ ಪಾಲ್ಗೊಂಡಿತ್ತು.
ಹೆಸ್ಕಾಂ ಇಲಾಖೆ ಎಇಇ ಗೌಸಪೀರ್ ಎಂ., ಜೆಸಿಐ ಘಟಕದ ಅಧ್ಯಕ್ಷ ಬಾಪುಗೌಡ ಕೊಪ್ಪದ, ಪದಾಧಿಕಾರಿಗಳಾದ ಪ್ರಕಾಶ ಜಮಾದಾರ, ಪರಶುರಾಮ ಹೊಳಲ, ರಮೇಶ ಅರಗೋಳ, ಯೋಗೇಂದ್ರ ಜಂಬಗಿ, ಸುನಂದಾ ಚಿನ್ನಾಪೂರ ಹಾಗೂ ಇತರರು ಪಾಲ್ಗೊಂಡಿದ್ದರು.
ತೇಜಸ್ವಿನಿ ಕೊಂಡಿ, ಪ್ರೇಮಾ ಚಳ್ಳಾಳ ಹಾಗೂ ಸುನಂದಾ ಚಿನ್ನಾಪೂರ ನಿರ್ವಹಿಸಿದರು.