ಜಿಲ್ಲೆ

ಹೆಸ್ಕಾಂ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ

ಪ್ರಶಾಂತ ಹೂಗಾರ

ನಾಗರಮುನ್ನೋಳಿ: ಇಲ್ಲಿನ 220 ಎಂವಿಎ ಮತ್ತು 110 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಸಮರ್ಪಕ ವಿದ್ಯುತ್ ಪೂರೆಕೆ ಮಾಡಬೇಕೆಂದು ಆಗ್ರಹಿಸಿ ಹೆಸ್ಕಾಂ ಕಚೇರಿಗೆ ಬೀಗ ಹಾಕಿ ರೈತರು ಮಂಗಳವಾರ ಪ್ರತಿಭಟಿಸಿದರು.

ನಾಗರಮುನ್ನೋಳ್ಳಿ ವಿದ್ಯುತ್ ವಿತರಣಾ ಕೇಂದ್ರದ ಎದುರು ಸಮರ್ಪಕ ವಿದ್ಯುತ್ ಪೂರೈಸುವಂತೆ ಆಗ್ರಹಿಸಿ ರೆತರು ಪ್ರತಿಭಟಿಸಿದರು. ಭರಮಣ್ಣ ಯಾದಗೂಡೆ, ಎಂಬಿ.ಆಲೂರೆ, ಸಿದ್ದು ಈಟಿ, ನಿಜಾಂ ಪೆಂಡಾರಿ ಇತರರಿದ್ದರು.

ಚಿಕ್ಕೋಡಿ ತಾಲೂಕಿನ ಬೆಳಗಲಿ ಗ್ರಾಮದ ವ್ಯಾಪ್ತಿಯಲ್ಲಿ 20 ದಿನಗಳಿಂದ ಸಮರ್ಪಕ ವಿದ್ಯುತ್ ಪೂರೈಸಿಲ್ಲ. ತೋಟಪಟ್ಟಿ ರೆತರು ವಿದ್ಯುತ್ ಇಲ್ಲದೆ ಕಂಗಾಲಾಗಿದ್ದೇವೆ. ಹೆಸ್ಕಾಂ ಸಮರ್ಪಕ ವಿದ್ಯುತ್    ಉಮರಾಣಿ, ಬೆಳಕೂಡ, ಬೆಳಗಲಿ, ಜೋಡಕುರಳಿ, ನಾಗರಮುನ್ನೋಳ್ಳಿ ಸೇರಿ ವಿವಿಧ ಗ್ರಾಮದ ರೆತರು ಒತ್ತಾಯಿಸಿದರು.

ಭರಮಣ್ಣ ಯಾದಗೂಡೆ, ಎಂ.ಬಿ.ಆಲೂರೆ, ಸಿದ್ದು ಈಟಿ, ನಿಜಾಂ ಪೆಂಡಾರಿ, ಶಿವಗೌಡ ಕೊಟೆಪ್ಪಗೋಳ, ಬಾಬಲಾಲ ಮುಲ್ತಾನಿ, ಮಾರುತಿ ಹುಲ್ಲೋಳಿ, ಮನೋಜ ಮನಗೂಳಿ, ಲಕ್ಷ್ಮಣ ಹುದ್ದಾರ, ಭೀಮಪ್ಪ ಕಿವಡ, ಜೋಡಕುರಳಿ ಬಸಗೌಡ ಪಾಟೀಲ, ಸಚಿನ ಮೆತ್ರಿ, ಪೈಗಂಬರ್ ಜಮಾದರ್ ಇದ್ದರು.