ಹುಬ್ಬಳ್ಳಿ: ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯ ಉನ್ನತಿಕರಣದ ನಿಮಿತ್ತ ಹೆಸ್ಕಾಂ ಆನ್ ಲೈನ್ ಸೇವೆಗಳಲ್ಲಿ ಎರಡು ದಿನ ವ್ಯತ್ಯಯವಾಗಲಿದೆ.
ಜುಲೈ 25ರಿಂದ 27ರ ರಾತ್ರಿ 10ರ ವರೆಗೆ ವಿದ್ಯುತ್ ಬಿಲ್ ಪಾವತಿ, ಹೆಸರು ಬದಲಾವಣೆ, ಜಕಾತಿ ಬದಲಾವಣೆ ಹಾಗೂ ಹೊಸ ಸಂಪರ್ಕ ಸೇರಿದಂತೆ ಆನ್‌ಲೈನ್ ಆಧರಿತ ಸೇವೆಗಳು ಲಭ್ಯವಿರುವುದಿಲ್ಲ.
ಅಥಣಿ, ಬಾಗಲಕೋಟ, ಬೈಲಹೊಂಗಲ, ಬೆಳಗಾವಿ, ಭಟ್ಕಳ, ಚಿಕ್ಕೋಡಿ, ದಾಂಡೇಲಿ, ಗದಗ, ಗೋಕಾಕ, ಗುಳೇದಗುಡ್ಡ, ಹಾವೇರಿ, ಹುಬ್ಬಳ್ಳಿ- ಧಾರವಾಡ, ಇಳಕಲ್, ಇಂಡಿ, ಜಮಖಂಡಿ, ಕಾರವಾರ, ಕುಮಟಾ, ಲಕ್ಷ್ಮೇಶ್ವರ, ಮಹಾಲಿಂಗಪುರ, ಮುಧೋಳ, ನರಗುಂದ, ನಿಪ್ಪಾಣಿ, ರಬಕವಿ-ಬನಹಟ್ಟಿ, ರಾಮದುರ್ಗ, ರಾಣೆಬೆನ್ನೂರ, ಸವದತ್ತಿ, ಸವಣೂರ, ಶಿರಸಿ, ವಿಜಯಪುರ ಪಟ್ಟಣದಲ್ಲಿ ಆನ್ ಲೈನ್ ಸೇವೆಗಳು ಲಭ್ಯವಿರುವುದಿಲ್ಲ. ಗ್ರಾಹಕರು ಸಹಕಾರ ನೀಡಬೇಕೆಂದು ಹೆಸ್ಕಾಂ ಪ್ರಕಟಣೆ ಕೋರಿದೆ.