ಜಿಲ್ಲೆ

ಹೆಸ್ಕಾಂ ಗ್ರಾಹಕರ ಸಂವಾದ ಸಭೆ 16ರಂದು

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ಹೆಸ್ಕಾಂ ವಿಭಾಗ ಹಾಗೂ ಉಪವಿಭಾಗ ಕಚೇರಿಗಳಲ್ಲಿ ಆ. 16ರಂದು ಬೆಳಗ್ಗೆ 11ಕ್ಕೆ ಸಹಾಯಕ ಕಾರ್ಯನಿರ್ವಾಕ ಅಭಿಯಂತರರ ಅಧ್ಯಕ್ಷತೆಯಲ್ಲಿ ವಿದ್ಯುತ್ ಗ್ರಾಹಕರ ಸಂವಾದ ಸಭೆ ಆಯೋಜಿಸಲಾಗಿದೆ.

ನಗರದ ಕೇಶ್ವಾಪುರದ ಶಿವಗಂಗಾ ಬಡಾವಣೆಯ ಹೆಸ್ಕಾಂ ಕಚೇರಿ, ಪಿಎಚ್ ಕಾಂಪೌಂಡ್ ತಬೀಬ್ ಲ್ಯಾಂಡ್ ಹೆಸ್ಕಾಂ ಕಚೇರಿ, ಗೋಕುಲ ರಸ್ತೆಯ ಉದ್ಯಮ ನಗರದ ಹೆಸ್ಕಾಂ ಕಚೇರಿ ಹಾಗೂ ನವನಗರದ ಉಪ- ವಿಭಾಗದ ಕಚೇರಿಗಳಲ್ಲಿ ಸಭೆಗಳು ನಡೆಯಲಿವೆ.

ಗ್ರಾಹಕರು, ಸಾರ್ವಜನಿಕರು ಪಾಲ್ಗೊಂಡು ತಮ್ಮ ವಿದ್ಯುತ್ ಸಂಬಂಧಿತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಪ್ರಕಟಣೆ ಕೋರಿದೆ.