ಜಿಲ್ಲೆ

ವೀರ ಪರಾಕ್ರಮ ದಿವಸ ಆಚರಣೆ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ

ಇಲ್ಲಿನ ಸತ್ತೂರಿನ ರಾಷ್ಟ್ರೊತ್ಥಾನ ವಿದ್ಯಾ ಕೇಂದ್ರದಲ್ಲಿ ಸುಭಾಷ್​ಚಂದ್ರ ಬೋಸ್​ ಜಯಂತಿ ನಿಮಿತ್ತ ವೀರ ಪರಾಕ್ರಮ ದಿನವನ್ನು ಗುರುವಾರ ಆಚರಿಸಲಾಯಿತು.

ಶಾಲೆ ಶಿಕ್ಷಕಿ ರಶ್ಮಿ ಮಾತನಾಡಿ, ದೇಶದ ಮಹಾನ್​ ವ್ಯಕ್ತಿಯಾದ ನೇತಾಜಿ, ಸ್ವಾತಂತ್ರ್ಯ ಹೋರಾಟದಲ್ಲಿ ಅತ್ಯಂತ ವಿಶಿಷ್ಟ ಪಾತ್ರ ವಹಿಸಿದವರು. ಇಂತಹ ಮಹಾನ್​ ನಾಯಕರ ಆದರ್ಶ, ವ್ಯಕ್ತಿತ್ವವನ್ನು ಇಂದಿನ ಯುವಕರು ಅಳವಡಿಸಿಕೊಳ್ಳಬೇಕು ಎಂದ ಅವರು, ನೇತಾಜಿ ಜೀವನ ಚರಿತ್ರೆಯನ್ನು ಮಕ್ಕಳಿಗೆ ತಿಳಿಸಿದರು.

ಶಾಲೆಯ ಕರೆಸ್ಪಾಂಡೆಂಟ್​ ಗುರುರಾಜ ಅಗಡಿ, ಶಿಕ್ಷಕರು, ಇತರರು ಇದ್ದರು.