ಕೊಟ್ಟೂರಿನಲ್ಲಿ ಅನಾಥವಾಗಿ ಬಿದ್ದಿದ್ದ ಎರಡು ವೀರಗಲ್ಲು ಹಾಗೂ ಪಾರ್ವತಿ ಪರಮೇಶ್ವರ ವಿಗ್ರಹವನ್ನು ಗೊರ್ಲಿ ಶರಣಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜ್ ಆಚರಣಕ್ಕೆ ಸ್ಥಳಾಂತರಿಸಲಾಯಿತು. ಪ್ರಾಚಾರ್ಯ ಸೋಮಶೇಖರ್, ಉಪನ್ಯಾಸಕರಾದ ಡಿ.ಅಂಜಿನಪ್ಪ, ಮಗ್ಗದ ನಾಗರಾಜ್, ಪ್ರವೀಣ್ ಕುಮಾರ್, ಕಿರಣ್, ನಾಗರಾಜ, ಕೊಟ್ರೇಶ ಇತರರಿದ್ದರು. 
ಜಿಲ್ಲೆ

ಸುರಕ್ಷಿತ ಸ್ಥಳಕ್ಕೆ ಸೇರಿದ ವೀರಗಲ್ಲುಗಳು

ಗಾಯತ್ರಿ ಮಾಲಿಪಾಟೀಲ್

ಕೊಟ್ಟೂರು: ಪಟ್ಟಣದ ಸ್ವಾತಂತ್ರ ಹೋರಾಟಗಾರ ದಿ. ಡಾ.ನಂಜಪ್ಪ ಮನೆ ಪಕ್ಕದ ಬನ್ನಿಮರದ ಕಟ್ಟೆಯ ಮೇಲೆ ಹಾಗೂ ಕೆಳಗೆ ಇದ್ದ ಎರಡು ವೀರಗಲ್ಲುಗಳು ಮತ್ತು ಪಾರ್ವತಿ ಪರಮೇಶ್ವರ ಉಬ್ಬು ವಿಗ್ರಹವನ್ನು ಬುಧವಾರ ಗೊರ್ಲಿ ಶರಣಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣಕ್ಕೆ ಸ್ಥಳಾಂತರಿಸಲಾಯಿತು.

ಸೋಮವಾರ ಮಾ.17ರಂದು ವಿಜಯವಾಣಿ ಪತ್ರಿಕೆಯಲ್ಲಿ ರಕ್ಷಣೆಗಾಗಿ ಕಾದಿವೆ ವೀರಗಲ್ಲುಗಳು ಎಂಬ ಶೀರ್ಷಿಕೆಯಡಿ ಸುದ್ದಿಯನ್ನು ಪ್ರಕಟಿಸಲಾಗಿತ್ತು. ಇದರಿಂದ ಎಚ್ಚೆತ್ತುಕೊಂಡು ಗೊರ್ಲಿ ಶರಣಪ್ಪ ಸರ್ಕಾರಿ ಪ.ಪೂ ಕಾಲೇಜಿನ ಪ್ರಾಚಾರ್ಯ ಸೋಮಶೇಖರ್ ಮಾರ್ಗದರ್ಶನದಲ್ಲಿ ಕನ್ನಡ ಉಪನ್ಯಾಸಕರಾದ ಡಿ.ಅಂಜಿನಪ್ಪ, ಮಗ್ಗದ ನಾಗರಾಜ ಹಾಗೂ ದೈಹಿಕ ಶಿಕ್ಷಣ ಉಪನ್ಯಾಸಕ ಪ್ರವೀಣ್ ಕುಮಾರ್, ಹಳೇ ವಿದ್ಯಾರ್ಥಿಗಳು, ಸಾರ್ವಜನಿಕರ ಸಹಕಾರದಿಂದ ವೀರಗಲ್ಲುಗಳನ್ನು ಎತ್ತಿನ ಗಾಡಿಯಲ್ಲಿ ತಂದು ಕಾಲೇಜ್ ಆವರಣದಲ್ಲಿ ಇಟ್ಟಿದ್ದಾರೆ. ನಿರ್ಲಕ್ಷೃಕ್ಕೆ ಒಳಗಾಗಿ ಮೂತ್ರ ವಿಸರ್ಜನೆ ಸ್ಥಳದಲ್ಲಿ ಬಿದ್ದಿದ್ದ ವೀರ ಯೋಧರ ಕಥೆ ಸಾರುವ ಈ ವೀರಗಲ್ಲುಗಳು ಹಾಗೂ ಪಾರ್ವತಿ ಪರಮೇಶ್ವರನ ಉಬ್ಬು ಚಿತ್ರವಿರುವ ವಿಗ್ರಹಗಳು ಕಾಲೇಜಿನ ನೆರಳಿನಲ್ಲಿವೆ.

ಕನ್ನಡ ಉಪನ್ಯಾಸಕರಾದ ಡಿ.ಅಂಜಿನಪ್ಪ, ಮಗ್ಗದ ನಾಗರಾಜ್ ಪತ್ರಿಕೆಯೊಂದಿಗೆ ಮಾತನಾಡಿ, ಸ್ವಾಮಿ ನಿಷ್ಠೆಯಿಂದ ಯುದ್ಧದಲ್ಲಿ ವೀರಮರಣ ಹೊಂದಿದ ವೀರಯೋಧರ ನೆನಪಿನ ವೀರಗಲ್ಲುಗಳನ್ನು ಅಂದಿನ ರಾಜರು, ಪಾಳೆಗಾರರು ಕಲ್ಲಿನಲ್ಲಿ ಕೆತ್ತನೆ ಮಾಡಿದ್ದು, ವಿದ್ಯಾರ್ಥಿಗಳಿಗೆ ಇತಿಹಾಸ ತಿಳಿಸಲು ಸಹಕಾರಿಯಾಗಿವೆ.