ಗುಳೇದಗುಡ್ಡ: ಜೈನ ಧರ್ಮದ 24ನೇ ತೀರ್ಥಂಕರರಾದ ಭಗವಾನ ಮಹಾವೀರರು ಜಗತ್ತಿಗೆ ಅಹಿಂಸೆಯೇ ಪರಮೋಧರ್ಮ ಎಂಬ ಸರ್ವಕಾಲಿಕ ಸತ್ಯದ ಸಂದೇಶ ನೀಡಿದ್ದಾರೆ ಎಂದು ನಗರದ ಶ್ರೀ ವರ್ಧಮಾನ ಶ್ವೇತಾಂಬರ ಸ್ಥಾನಕವಾಸಿ ಜೈನ ಸಂಘದ ಅಧ್ಯಕ್ಷ ರಾಹುಲ್ ಗುಂದೇಚಾ ಹೇಳಿದರು.
ಗುಂದೆಚಾ ಅವರ ಮನೆಯಲ್ಲಿ ಗುರುವಾರ ಶ್ರೀ ವರ್ಧಮಾನ ಶ್ವೇತಾಂಬರ ಸ್ಥಾನಕವಾಸಿ ಜೈನ ಸಂಘ ಹಾಗೂ ಮಹಿಳಾ ಮಂಡಳದ ವತಿಯಿಂದ ಹಮ್ಮಿಕೊಂಡಿದ್ದ ಭಗವಾನ ಮಹಾವೀರರ 2624ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಗವಾನ ಮಹಾವೀರರು ಈ ದೇಶದ ಮಹಾನ್ ಧಾರ್ಮಿಕ ಪುರಷ. ಅವರ ಸತ್ಯ, ಅಹಿಂಸೆಯಂತಹ ತತ್ವ, ಸಿದ್ಧಾಂತಗಳನ್ನು ಎಲ್ಲರೂ ಅನುಸರಿಸಿ ಶಾಂತಿ, ಸಹಬಾಳ್ವೆಯಿಂದ ಬದುಕುಬೇಕು ಎಂದರು.
ಮಾರವಾಡಿ ಗೋ ಶಾಲೆಯಲ್ಲಿ ಅನ್ನಸಂತರ್ಪಣೆ ಜರುಗಿತು. ಸಂಘದ ಉಪಾಧ್ಯಕ್ಷ ಜೇಠಮಲಾಜಿ ಕಠಾರಿಯಾ, ಕಿಶೋರಜಿ ಗಾಂಧಿ, ನರೇಂದ್ರಜಿ ಗುಗಳೆ, ಮಹಾವೀರಜಿ ಕಠಾರಿಯಾ, ಮುನ್ನಾಲಾಲಜಿ ಜೈನ್, ಸುರೇಶ ಕಠಾರಿಯಾ, ಓಂಪ್ರಕಾಶ ಕಠಾರಿಯಾ, ಶಾಂತಿಲಾಲ ಕಠಾರಿಯಾ, ವಿನಯ ಕಠಾರಿಯಾ, ಮಹಿಳಾಮಂಡಳದ ಅಧ್ಯಕ್ಷೆ ಶಾಮಾಬಾಯಿ ಗಾಂಧಿ, ಮಧುಬಾಯಿ ಕಠಾರಿಯಾ, ಆಶಾ ಗುಂದೆಚಾ, ವೀಣಾಬಾಯಿ ಕಠಾರಿಯಾ, ವರ್ಷಾ ಕಠಾರಿಯಾ, ಪ್ರತಿಭಾ ಕಠಾರಿಯಾ, ನಮ್ರತಾ ಕಠಾರಿಯಾ, ಸಂಗೀತಾಬಾಯಿ ಗುಗಳೆ, ಶಾಲೂ ಕಠಾರಿಯಾ, ಸುನೀತಾ ಕಠಾರಿಯಾ, ಸಾಕ್ಷಿ ಕಠಾರಿಯಾ, ಸ್ನೇಹಾ ಗುಗಳೆ ಮತ್ತಿತರರಿದ್ದರು.