ಬೆಳಗಾವಿ:ಕನ್ನಡದ ಕೆಜಿಎಫ್, ಕಾಂತಾರ ಬಳಿಕ ಅಶೋಕ ಬ್ಲೇಡ್ ಸಿನಿಮಾವು ಸಹ ಪ್ಯಾನ್ ಇಂಡಿಯಾ ಆಗಿ ಕನ್ನಡ, ತಮಿಳು, ತೆಲಗು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ ಎಂದು ನಟ ನೀನಾಸಂ ಸತೀಶ ವಿವರಿಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 1976ರ ದಶಕದ ಹೋರಾಟ ಕಥೆಯನ್ನು ಹೊಂದಿರುವ ಅಶೋಕ ಬ್ಲೇಡ್ ಒಂದು ಸಾಮಾಜಿಕ ಕಂಟೆಂಟ್ ಇರುವಂತಹ ಸಿನಿಮಾ. ಕಂಟೆಂಟ್ ಸಿನಿಮಾವನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಮಾಡಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ.ಈಗಾಗಲೇ ಅಶೋಕ ಬ್ಲೇಡ್ ಸಿನಿಮಾ ಚಿತ್ರಿಕರಣ ಅಂತಿಮ ಹಂತಕ್ಕೆ ಬಂದಿದ್ದು, ಶೀಘ್ರದಲ್ಲಿಯೇ ಬಿಡುಗಡೆ ಮಾಡಲಾಗುವುದು ಎಂದರು.
ಅಶೋಕ ಬ್ಲೇಡ್ ಸಿನಿಮಾದಲ್ಲಿ ಐತಿಹಾಸಿಕವಾದ ಯುದ್ಧ ಸನ್ನಿವೇಶದಲ್ಲಿ ನಟಿಸಲು ಒಬ್ಬರು ಸೂಪರ್ ಸ್ಟಾರ ಬರುತ್ತಿದ್ದಾರೆ. ನನ್ನ ಸಿನಿ ಜರ್ನಿಯನ್ನು ಅತ್ಯಂತ ದೊಡ್ಡ ಬಜೆಟ್ ಸಿನಿಮಾ ಇದಾಗಿದೆ. ಕನ್ನಡದಲ್ಲಿ ಯಶಸ್ವಿಯಾದ ಬಳಿಕವೇ ಎಲ್ಲ ಪ್ರಾದೇಶಿಕ ಭಾಷೆಗಳನ್ನು ಸಿನಿಮಾ ಮೂಡಿಬರಲಿದೆ. ಸದ್ಯ ಮೂರು ಭಾಷೆಗಳಲ್ಲಿ ಮಾತ್ರ ಬಿಡುಗಡೆ ಆಗಲಿದೆ.