ಜಿಲ್ಲೆ

ಸಂಗೀತ ಸಾರ್ವಕಾಲಿಕ ಮನರಂಜನೆ

Chitradurga

ಹಿರಿಯೂರು: ಸಂಗೀತ ಸಾರ್ವಕಾಲಿಕವಾಗಿ ಮನರಂಜನೆ ನೀಡಬಲ್ಲ ಕಲಾಪ್ರಕಾರ ಎಂದು ರಾಜ್ಯಪ್ರಶಸ್ತಿ ಪುರಸ್ಕೃತ, ಸಂಗೀತ ನಿರ್ದೇಶಕ ಜಿ.ಡಿ.ತಿಮ್ಮಯ್ಯ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕಾಟಮಹಲಿಂಗೇಶ್ವರ ಸಾಂಸ್ಕೃತಿಕ ಭಜನಾ ಸಂಘದಿಂದ ತಾಲೂಕಿನ ವೇಣುಕಲ್ಲುಗುಡ್ಡ ಗ್ರಾಮದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಸುಗಮ ಸಂಗೀತ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಂಗೀತ ಎಲ್ಲ ವರ್ಗ, ವಯೋಮಾನದವರಿಗೂ ತಲುಪಬಲ್ಲ, ಬೇಸರ ನೀಗಿಸಿ ಮನೋ ಚೈತನ್ಯವುಂಟು ಮಾಡಬಲ್ಲ ಮಾಧ್ಯಮ ಎಂದು ಹೇಳಿದರು.

ಗ್ರಾಪಂ ಉಪಾಧ್ಯಕ್ಷ ವೀರಣ್ಣ, ಸದಸ್ಯರಾದ ಲಿಂಗಪ್ಪ, ಶ್ರೀದೇವಿ ಜೋಗಣ್ಣ, ವೀಣಾ ಮಂಜುನಾಥ್, ಗ್ರಾಮಸ್ಥರಾದ ಮಲ್ಲಿಕಾರ್ಜುನ, ಕಸ್ತೂರಪ್ಪ, ಕರಿಯಣ್ಣ, ರಾಜಣ್ಣ ಇತರರು ಇದ್ದರು.