ಜಿಲ್ಲೆ

ಕರೊನಾ ತಡೆಗೆ ನಿರ್ಬಂಧ ಅನಿವಾರ್ಯ

Chitradurga

ಹಿರಿಯೂರು: ಕರೊನಾ ಸೋಂಕು ತಡೆಗೆ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಜತೆಗೆ ಆರೋಗ್ಯಕ್ಕಾಗಿ ಸರ್ಕಾರದ ಆದೇಶ ಪಾಲಿಸುವುದು ಅನಿವಾರ್ಯ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಹೊನ್ನಾಂಬ ಹೇಳಿದರು.

ತಾಲೂಕಿನ ಬಬ್ಬೂರಿನಲ್ಲಿ ಗುರುವಾರ ಕರೊನಾ ವೈರಸ್ ತಡೆಗೆ ಕ್ಲೋರಿನೇಷನ್ ಸಿಂಪಡಣೆಗೆ ಚಾಲನೆ ನೀಡಿ ಮಾತನಾಡಿದರು.

ಸ್ವಯಂ ನಿರ್ಬಂಧ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕರೊನಾ ಮಹಾಮಾರಿ ತಡೆಗೆ ರಾಮಬಾಣವಾಗಿದೆ. ಗ್ರಾಮೀಣ ಭಾಗದಲ್ಲಿ ವೈರಸ್ ಬಗ್ಗೆ ಜನರಲ್ಲಿ ವ್ಯಾಪಕವಾಗಿ ಜಾಗೃತಿ ಮೂಡಿಸಬೇಕು. ಸೋಂಕು ತಡೆಗೆ ಜನರ ಸಹಕಾರ ಅಗತ್ಯ ಎಂದರು.

ಜಿಪಂ ಸದಸ್ಯ ಆರ್.ನಾಗೇಂದ್ರನಾಯ್ಕ ಮಾತನಾಡಿ, ತಾಲೂಕು-ಗ್ರಾಮ ಪಂಚಾಯಿತಿ ಹಾಗೂ ಸ್ಥಳೀಯರ ಸಹಕಾರದಿಂದ ವಿವಿ ಪುರ ಜಿಪಂ ಕ್ಷೇತ್ರದಲ್ಲಿ ಕರೊನಾ ಸೋಂಕು ತಡೆಗೆ ರಾಸಾಯನಿಕ ಸಿಂಪಡಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ತಾಪಂ ಸದಸ್ಯ ಓಂಕಾರಪ್ಪ, ಇಒ ಹನುಮಂತಪ್ಪ, ಗ್ರಾಪಂ ಅಧ್ಯಕ್ಷೆ ಮಂಜುಳಾ, ಸದಸ್ಯರಾದ ಹೇಮಂತ್ ಯಾದವ್, ವಿಶ್ವ, ಶಿವಣ್ಣ, ಗೌರಿ ಶಂಕರನಾಯ್ಕ, ಪಿಡಿಒ ಶ್ರೀನಿವಾಸ್, ಸಮಾಜ ಸೇವಕರಾದ ಪ್ರಶಾಂತ್, ಪ್ರಕಾಶ್ ಇತರರಿದ್ದರು.