ಹಿರಿಯೂರು: ಬೆಂಗಳೂರಿನ ಪಾದರಾಯನಪುರ ಗಲಭೆಕೋರರನ್ನು ಬೆಂಬಲಿಸಿ ಶಾಸಕ ಜಮೀರ್ ಅಹಮ್ಮದ್ ಹೇಳಿಕೆ ನೀಡಿದ್ದಾರೆ ಎಂದು ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಕೇಶವಮೂರ್ತಿ ದೂರಿದ್ದಾರೆ.
ತಕ್ಷಣ ಜಮೀರ್ ಅವರನ್ನು ಬಂಧಿಸಿ ಉನ್ನತ ಮಟ್ಟದ ತನಿಖೆ ನಡೆಸಬೇಕು. ಕರೊನಾ ಶಂಕಿತರನ್ನು ಕ್ವಾರಂಟೈನ್‌ಗೆ ಕರೆದೊಯ್ಯಲು ತೆರಳಿದ್ದ ಆರೋಗ್ಯ-ಪೊಲೀಸ್ ಇಲಾಖೆ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರ ಮೇಲೆ ಸ್ಥಳೀಯ ಪುಂಡರು ದಾಳಿ ನಡೆಸಿರುವುದು ಅಮಾನವೀಯ ಕೃತ್ಯ. ರಾಜ್ಯ ಸರ್ಕಾರ ಸಾಫ್ಟ್ ಕಾರ್ನರ್ ನೀತಿಯಿಂದ ಹೊರ ಬಂದು ಉತ್ತರ ಪ್ರದೇಶ ಸರ್ಕಾರದ ರೀತಿ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.