ಜಿಲ್ಲೆ

ಹುಬ್ಬಳ್ಳಿಯಲ್ಲಿ ರಾಹುಲ್ ಗಾಂಧಿ ಸಭೆ ರದ್ದು ಎಂಬ ಸುದ್ದಿ!; ಕಾರ್ಯಾಧ್ಯಕ್ಷರು ಹೇಳಿದ್ದೇನು?

Webdesk - Ravikanth

ಹುಬ್ಬಳ್ಳಿ: ಕಾಂಗ್ರೆಸ್​ ವರಿಷ್ಠ ರಾಹುಲ್ ಗಾಂಧಿ ಮತ್ತಿತರ ಹಿರಿಯ ನಾಯಕರ ಉಪಸ್ಥಿತಿಯಲ್ಲಿ ಇಂದು ಹುಬ್ಬಳ್ಳಿಯಲ್ಲಿ ಕೆಪಿಸಿಸಿ ರಾಜಕೀಯ ವ್ಯವಹಾರ ಸಮಿತಿಗಳ ಸಭೆ ಇದ್ದು, ಪ್ರಮುಖ ನಾಯಕರೆಲ್ಲ ಹುಬ್ಬಳ್ಳಿಯಲ್ಲಿದ್ದಾರೆ. ಈ ಮಧ್ಯೆ ಸಭೆ ರದ್ದು ಎಂಬಂಥ ವಿಚಾರ ಹೊರಹೊಮ್ಮಿದ್ದು, ಅದರ ಬೆನ್ನಿಗೇ ಸ್ಪಷ್ಟನೆಯೊಂದು ಹೊರಹೊಮ್ಮಿದೆ.

ರಾಜಕೀಯ ವ್ಯವಹಾರ ಸಮಿತಿಗಳ ಸಭೆ ರದ್ದಾಗಿದೆ ಎಂದು ಹೇಳುತ್ತಿದ್ದಾರೆ. ಈಗಷ್ಟೇ ಸಭೆ ರದ್ದಾದ ಬಗ್ಗೆ ಮಾಹಿತಿ ಬಂದಿದೆ. ಯಾಕೆ ರದ್ದಾಗಿದೆ ಅಂತ ಗೊತ್ತಿಲ್ಲ, ಇನ್ನೂ ಕನಫರ್ಮ್ ಆಗಿಲ್ಲ ಎಂದು ಮಾಜಿ ಸಚಿವ ಸಂತೋಷ್ ಲಾಡ್ ಅವರು ಹೇಳಿದ್ದಾರೆ.

ಇದರ ಬೆನ್ನಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹೇಳಿಕೆ ನೀಡಿದ್ದು, ಕೆಪಿಸಿಸಿ ರಾಜಕೀಯ ವ್ಯವಹಾರಗಳ ಸಮಿತಿ ಸಭೆ ರದ್ದಾಗಿಲ್ಲ ಎಂದು ಸ್ಪಷ್ಟನೆಯನ್ನು ನೀಡಿದ್ದಾರೆ. ‌ನಿಗದಿಯಂತೆ ಸಭೆ ನಡೆಯುತ್ತದೆ. ಒಟ್ಟು 42 ಜನ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಳ್ಳುತ್ತಾರೆ. ರಾಹುಲ್ ಗಾಂಧಿ, ವೇಣುಗೋಪಾಲ್ ಮತ್ತು ಡಿಕೆಶಿ ದೆಹಲಿಯಿಂದ ಬರುತ್ತಾರೆ. ಅವರು ಬರುವುದು ಸ್ವಲ್ಪ ತಡವಾಗುತ್ತಿದೆ, ಹೀಗಾಗಿ ಸಭೆ ತಡವಾಗಿ ಆರಂಭಗೊಳ್ಳುತ್ತದೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ರಾತ್ರಿ 7.50ರ ಹೊತ್ತಿಗೆ ಅವರು ಬರುತ್ತಾರೆ. ವಿಮಾನ ನಿಲ್ದಾಣದಿಂದ ಸ್ವಾಗತಿಸಿಕೊಂಡು ಬರುತ್ತೇವೆ. ಸಭೆ ರಾತ್ರಿ 8.30ರ ಹಾಗೆ ಆರಂಭಗೊಳ್ಳುತ್ತದೆ. ಸಭೆ ಯಾವುದೇ ಕಾರಣಕ್ಕೂ ರದ್ದಾಗುವುದಿಲ್ಲ, ತಡವಾಗಿ ನಡೆಯುತ್ತದೆಯಷ್ಟೇ ಎಂದು ಸಲೀಂ ಹೇಳಿದ್ದಾರೆ.