ಜಿಲ್ಲೆ

ಕಡಬದಲ್ಲಿ ಬೆಳ್ಳಂಬೆಳಗ್ಗೆ ತೋಟಕ್ಕೆ ಲಗ್ಗೆ ಇಟ್ಟ ಆನೆ

ಕಡಬ: ಕೊಂಬಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿರಿಬಾಗಿಲು ಗ್ರಾಮದ ಕಾಡಂಚಿನ ಪ್ರದೇಶದಲ್ಲಿ ಕಳೆದ ಒಂದು ವಾರದಿಂದ ಕಾಡಾನೆಗಳು ಕೃಷಿ ತೋಟಗಳಿಗೆ ದಾಳಿಮಾಡಿ ಹಾನಿಯುಂಟು ಮಾಡುತ್ತಿವೆ.

ಗುರುವಾರ ಬೆಳ್ಳಂ ಬೆಳಗ್ಗೆ ಕೃಷಿ ತೋಟಗಳಲ್ಲಿ ಕಾಡಾನೆ ಕಾಣಿಸಿಕೊಂಡು ಆತಂಕ ಸೃಷ್ಟಿಸಿತು. ಪಿಲಿಕಜೆ ಎಂಬಲ್ಲಿ ಪಿ.ಸಿ.ಸುಂದರ ಗೌಡ ಎಂಬುವರ ತೋಟಕ್ಕೆ ಲಗ್ಗೆಯಿಟ್ಟ ಆನೆ ಅಡಕೆ, ತೆಂಗು, ಕೊಕ್ಕೋ, ಬಾಳೆ ಮೊದಲಾದ ಕೃಷಿಯನ್ನು ನಾಶಪಡಿಸಿದೆ.

ಅರಣ್ಯ ಇಲಾಖೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಈ ಭಾಗದ ರೈತರು ಆಗ್ರಹಿಸಿದ್ದಾರೆ.