ಬೆಂಗಳೂರು: ರಾಷ್ಟ್ರೀಯ ವೈರಲ್ ಹೆಪಟೈಟಿಸ್ ನಿಯಂತ್ರಣ ಕಾರ್ಯಕ್ರಮದಡಿ ಆರೋಗ್ಯ ಕಾರ್ಯಕರ್ತರಿಗೆ ಹೆಪಟೈಟಿಸ್ ಬಿ ಲಸಿಕೆ ನೀಡುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.
ರಾಜ್ಯ ಲಸಿಕಾ ಉಗ್ರಾಣ ಬೆಂಗಳೂರಿಗೆ ಕೇಂದ್ರ ವಿಭಾಗದಿಂದ ಹೆಪಟೈಟಿಸ್ ಬಿ ಲಸಿಕೆ ಪೂರೈಸಲಾಗಿದ್ದು, ಅಗತ್ಯಕ್ಕೆ ಅನುಗುಣವಾಗಿ ಜಿಲ್ಲಾ ಔಷಧ ಉಗ್ರಾಣಗಳಿಗೆ ಸರಬರಾಜು ಮಾಡಲಾಗುವುದು ಎಂದು ತಿಳಿಸಿದೆ.
ಸದರಿ ಲಸಿಕೆಯನ್ನು ಆಯಾ ಜಿಲ್ಲೆಯ ಉಪಕೇಂದ್ರ, ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳು, ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಆರೋಗ್ಯ ಕಾರ್ಯಕರ್ತರಿಗೆ (ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಸಿಬ್ಬಂದಿ) ನೀಡಬೇಕು. ಜಿಲ್ಲಾ ಔಷಧ ಉಗ್ರಾಣಗಳಿಗೆ ಸರಬರಾಜು ಮಾಡಲಾಗುವ ಲಸಿಕೆಯನ್ನು ಅಗತ್ಯ ಕುರಿತು ಆರ್‌ಸಿಎಚ್ ಅಧಿಕಾರಿಗಳೊಂದಿಗೆ ಸಮನ್ವಯ ನಡೆಸಬೇಕು. ಲಸಿಕೆ ಸರಬರಾಜು ಹಾಗೂ ಅರ್ಹ ಲಾನುಭವಿಗಳಿಗೆ ಲಸಿಕೆ ನೀಡುವಲ್ಲಿ ಜಿಲ್ಲಾ ಕ್ಷಯ ರೋಗ ನಿಯಂತ್ರಣ ಅಧಿಕಾರಿಗಳು ಕ್ರಮ ವಹಿಸಬೇಕು. ಲಾನುಭವಿಗಳಿಗೆ ಲಸಿಕೆ ನೀಡಿರುವ ವರದಿಯನ್ನು ಎನ್.ವಿ.ಎಚ್.ಸಿ.ಪಿ./ ಎಂ.ಐಎಸ್ ಪೋರ್ಟಲ್‌ನಲ್ಲ ನಮೂದಿಸಬೇಕು. ಲಸಿಕೆ ನೀಡುವ ಹಾಗೂ ವರದಿ ಮಾಡುವ ಕುರಿತು ಶೀಘ್ರದಲ್ಲೇ ತರಬೇತಿ ನೀಡುವುದಾಗಿ ಇಲಾಖೆ ತಿಳಿಸಿದೆ.