ಸುಳ್ಯ: ಮಕ್ಕಳ ಅಭಿವೃದ್ಧಿ ಇಲಾಖೆ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಬೆಳ್ಳಾರೆ ವಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರ, ಗ್ರಾಪಂ ಬೆಳ್ಳಾರೆ, ಧನಲಕ್ಷ್ಮೀ ಸ್ತ್ರೀ ಶಕ್ತಿ ಗೊಂಚಲು ಸಮಿತಿ ಮತ್ತು ಸ್ನೇಹಿತರ ಕಲಾ ಸಂಘ ಆಶ್ರಯದಲ್ಲಿ, ರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹ, ಪೋಷಣ್ ಮಾಸಾಚರಣೆ, ಹಿಮೋಗ್ಲೋಬಿನ್ ತಪಾಸಣೆ ಮತ್ತು ಆರೋಗ್ಯ ಮಾಹಿತಿ ಕಾರ್ಯಕ್ರಮ ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆಯಿತು.
ಶಾಸಕಿ ಭಾಗೀರಥಿ ಮುರುಳ್ಯ ಕಾರ್ಯಕ್ರಮ ಉದ್ಘಾಟಿಸಿದರು. ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ, ಇಲಾಖೆ ಉಪನಿರ್ದೇಶಕ ಉಸ್ಮಾನ್ ಎ, ಜಿಲ್ಲಾ ಅಭಿವೃದ್ಧಿ ಅಧಿಕಾರಿ ರಶ್ಮಿ ಕೆ.ಎಂ ಶುಭಹಾರೈಸಿದರು. ಡಾ.ವರ್ಷಿಣಿ ಶೆಣೈ ಮಾಹಿತಿ ನೀಡಿದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುಳ್ಯ ಶೈಲಜಾ ಬಿ. ಪ್ರಸ್ತಾಪಿಸಿದರು.
ಬೆಳ್ಳಾರೆ ಗ್ರಾಪಂ ಅಧ್ಯಕ್ಷೆ ನಮಿತಾ ಎಲ್.ರೈ ಅಧ್ಯಕ್ಷತೆ ವಹಿಸಿದ್ದರು. ವೈದ್ಯಾಧಿಕಾರಿ ಡಾ.ಕಿರಣ್ ಯು, ಕಲಾ ಸಂಘದ ಅಧ್ಯಕ್ಷ ಪದ್ಮನಾಭ ಬೀಡು, ಬೆಳ್ಳಾರೆ ಪಿಡಿಒ ಪ್ರವೀಣ್ ಕುಮಾರ್ ಸಿ.ವಿ, ಗೊಂಚಲು ಸಮಿತಿ ಅಧ್ಯಕ್ಷೆ ನಿಶ್ಮಿತಾ ಬೀಡು ಉಪಸ್ಥಿತರಿದ್ದರು. ಬೆಳ್ಳಾರೆ ಗ್ರಾಪಂ ಮಾಜಿ ಅಧ್ಯಕ್ಷ ಚಂದ್ರಶೇಖರ ಪನ್ನೆ ಸ್ವಾಗತಿಸಿದರು. ವಲಯ ಮೇಲ್ವಿಚಾರಕಿ ಉಷಾ ಪ್ರಸಾದ್ ರೈ ವಂದಿಸಿದರು.
ಪ್ರಶಸ್ತಿ ಪುರಸ್ಕೃತ ಕಲ್ಲೋಣಿ ಸ್ತ್ರೀ ಶಕ್ತಿ ಗುಂಪು ಸದಸ್ಯರನ್ನು ಅಭಿನಂದಿಸಲಾಯಿತು. ಸಾಮೂಹಿಕ ಸೀಮಂತ ನಡೆಯಿತು. 55 ಬಗೆಯ ವಿಭಿನ್ನ ಪೌಷ್ಟಿಕ ಆಹಾರ ಪ್ರದರ್ಶನ ನಡೆಯಿತು. ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸುಳ್ಯ ತಾಲೂಕು ಮಹಿಳೆಯರ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷೆ ರಾಜೀವಿ ಆರ್.ರೈ ಪುಡ್ಕಜೆ ಮತ್ತು ಸುಳ್ಯ ತಾಲೂಕು ತಹಸೀಲ್ದಾರ್ ಮಂಜುನಾಥ್ ಟಿ. ಭೇಟಿ ನೀಡಿ ಶುಭ ಹಾರೈಸಿದರು.