ದೇವದುರ್ಗ: ಮಹಾಸ್ವಾದಿ ಹೇಮರೆಡ್ಡಿ ಮಲ್ಲಮ್ಮ ಎಲ್ಲರಿಗೂ ಆದರ್ಶ ಮಹಿಳೆಯಾಗಿದ್ದು, ಭಕ್ತಿ ಮಾರ್ಗದ ಮೂಲಕ ಶ್ರೀಶೈಲ ಮಲ್ಲಿಕಾರ್ಜುನ ದೇವರ ಮಹಿಮೆ ನಾಡಿಗೆ ಸಾರಿದ್ದಾಳೆ ಎಂದು ಹೇಮರೆಡ್ಡಿ ಮಲ್ಲಮ್ಮ ಸಮಾಜದ ಅಧ್ಯಕ್ಷ ಬುಡ್ಡನಗೌಡ ಪಾಟೀಲ್ ಜಾಗಟಗಲ್ ಹೇಳಿದರು.
ಇದನ್ನೂ ಓದಿ: ಹೇಮರೆಡ್ಡಿ ಮಲ್ಲಮ್ಮ ಜಯಂತಿ ಅರ್ಥಪೂರ್ಣ ಆಚರಣೆ ಮಾಡಿ
ತಾಲೂಕಿನ ಕಕ್ಕಲದೊಡ್ಡಿ ಗ್ರಾಮದ ಶ್ರೀಮಾರುತಿ ದೇವಸ್ಥಾನದಲ್ಲಿ ಹೇಮರೆಡ್ಡಿ ಮಲ್ಲಮ್ಮ ಜಯಂತಿ ನಿಮಿತ್ತ ಆಯೋಜಿಸಿದ್ದ ಮನೆಮನೆ ಮಲ್ಲಮ್ಮ ಭಾವಚಿತ್ರ, ಮಲ್ಲಮ್ಮ ಚರಿತ್ರೆ ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದರು.
ಮಹಾಸ್ವಾದಿ ಹೇಮರೆಡ್ಡಿ ಮಲ್ಲಮ್ಮ ಭಕ್ತಿಯ ಜತೆಗೆ ಕಾಯಕದ ಮಹತ್ವ ನಾಡಿಗೆ ಸಾರಿದ್ದಾರೆ. ಮೇ 11ರಂದು ದೇವದುರ್ಗದಲ್ಲಿ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಹಾಗೂ ಬೃಹತ್ ಸಮಾವೇಶ ಆಯೋಜಿಸಲಾಗಿದೆ. ಇದರ ಬಗ್ಗೆ ಅರಿವು ಮೂಡಿಸುವ ಜತೆಗೆ ಹೇಮರೆಡ್ಡಿ ಮಲ್ಲಮ್ಮ ಅವರ ಚರಿತ್ರೆ ತಿಳಿಸಲು ಸಮಾಜದ ಜನರ ಮನೆಮನೆಗೆ ತೆರಳಿ ಭಾವಚಿತ್ರ ನೀಡಲಾಗುತ್ತಿದೆ. ಜಯಂತಿ ಕಾರ್ಯಕ್ರಮದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು ಎಂದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಉಪಾಧ್ಯಕ್ಷ ಚಂದ್ರಶೇಖರ ಪಾಟೀಲ್ ಮಿಯ್ಯಪುರ, ಜಿಪಂ ಮಾಜಿ ಸದಸ್ಯ ಸಿ.ಎಸ್. ಪಾಟೀಲ್, ಹೇಮರೆಡ್ಡಿ ಮಲ್ಲಮ್ಮ ಸಮಾಜದ ತಾಲೂಕು ಗೌರವಾಧ್ಯಕ್ಷ ವೆಂಕಟರಾಯ ಬೆನಕನ್, ರಾಜ್ಯ ಕಾರ್ಯದರ್ಶಿ ಸಂಜೀವ ರೆಡ್ಡಿ ಸಾಹುಕಾರ, ಪ್ರಮುಖರಾದ ಶರಣಗೌಡ ಬಕ್ರಿ, ಭೀಮನಗೌಡ, ಕೊಳ್ಳಪ್ಪ ದೇಸಾಯಿ, ಅಮರೇಶ ಮಾಪಾ ಇತರರಿದ್ದರು.