ಹೇಮರಡ್ಡಿ ಮೇಟಿ 
ಜಿಲ್ಲೆ

ಕೃಷಿ ಸಂಶೋಧನಾ ಪರಿಷತ್ ಸದಸ್ಯರಾಗಿ ಹೇಮರಡ್ಡಿ ಮೇಟಿ ನೇಮಕ

ಮುದ್ದೇಬಿಹಾಳ : ತಾಲೂಕಿನ ಬಸರಕೋಡದ ಪ್ರಗತಿಪರ ರೈತ, ಜಿ.ಪಂ. ಮಾಜಿ ಸದಸ್ಯ ಹೇಮರಡ್ಡಿ ಮೇಟಿ ಅವರನ್ನು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿಗಳ ಅಧ್ಯಕ್ಷತೆಯ ರಿಸರ್ಚ್ ಕೌನ್ಸಿಲ್‌ಗೆ (ಕೃಷಿ ಸಂಶೋಧನಾ ಪರಿಷತ್) ಸದಸ್ಯರನ್ನಾಗಿ ಎರಡು ವರ್ಷಗಳ ಅವಧಿಗೆ ನಾಮನಿರ್ದೇಶನ ಮಾಡಿ ವಿವಿಯ ರಿಜಿಸ್ಟ್ರಾರ್ ಜಯಲಕ್ಷ್ಮೀ ಅವರು ಆದೇಶ ಹೊರಡಿಸಿದ್ದಾರೆ.

ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳಲ್ಲಿ ವಿಶೇಷ ಅನುಭವ ಹಾಗೂ ಸೇವೆ ಪರಿಗಣಿಸಿ, ಇವರನ್ನು ವಿವಿಯ ಕುಲಪತಿ ಡಾ. ಪಿ.ಎಲ್. ಪಾಟೀಲ ಅವರು ಶಿಾರಸು ಮಾಡಿದ್ದರು. ಕೌನ್ಸಿಲ್ ಕೃಷಿ, ತೋಟಗಾರಿಕೆ, ರೇಷ್ಮೆ ಸೇರಿ ಪೂರಕ ಸರ್ಕಾರಿ ಇಲಾಖೆಗಳ ನಿರ್ದೇಶಕರು, ವಿಜ್ಞಾನಿಗಳು, ಸಂಶೋಧಕರು, ವಿವಿಯ ಎಚ್‌ಒಡಿ ಹಾಗೂ ನವದೆಹಲಿಯ ಐಸಿಎಆರ್‌ನ ಎಡಿಜಿ ಅವರನ್ನು ಒಳಗೊಂಡಿದೆ. ಇವರು ಸದಸ್ಯರಾಗಿ ನಾಮನಿರ್ದೇಶನ ಹೊಂದಿದ್ದಕ್ಕೆ ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್. ಪಾಟೀಲ ನಡಹಳ್ಳಿ ಹರ್ಷ ವ್ಯಕ್ತಪಡಿಸಿದ್ದಾರೆ.