ಅರಕೇರಾ: ಎಸ್ಸೆಸ್ಸೆಲ್ಸಿಯಲ್ಲಿ ಸಮೀಪದ ಹೇಮನೂರು ಸರ್ಕಾರಿ ಪ್ರೌಢ ಶಾಲೆ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
ವಿದ್ಯಾರ್ಥಿಗಳಾದ ಅಯ್ಯಮ್ಮ ಬಸವರಾಜ 599, ಕಾರ್ತಿಕ ಸಣ್ಣ ರಂಗಯ್ಯ 566, ಸುಜಾತಾ ಹನುಮಂತ 550, ರೂಪಾ ಮೂಕಪ್ಪ 543 ಅಂಕ ಗಳಿಸಿದ್ದು, ಇವರು ಕನ್ನಡ ವಿಷಯದಲ್ಲಿ 125ಕ್ಕೆ 125 ಅಂಕ ಪಡೆದ್ದಾರೆ. ದುರುಗಮ್ಮ ರಾಮನಗೌಡ 596, ಅರ್ಚನಾ ಬಾಲಪ್ಪ 572, ಸುನಂದಾ ಸುರೇಶ 552, ಅಂಕಿತಾ ಹನುಮೇಶ 542, ರಂಗನಾಥ ಅಮರೇಶ ನಾಯಕ 540, ರಾಮಸ್ವಾಮಿ ಭೀಮಣ್ಣ 539, ರೂಪಾ ಹನುಮಂತ 534 ಅಂಕ ಗಳಿಸಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ಪರೀಕ್ಷೆಗೆ ಹಾಜರಾದ 138 ವಿದ್ಯಾರ್ಥಿಗಳ ಪೈಕಿ 90 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಅತ್ಯುನ್ನತ ಶ್ರೇಣಿಯಲ್ಲಿ 11, ಪ್ರಥಮ 52, ದ್ವಿತೀಯ ಶ್ರೇಣಿಯಲ್ಲಿ 26 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಬಹುತೇಕ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಕಳೆದ ವರ್ಷ ಶಾಲೆ ಶೇ.84 ಫಲಿತಾಂಶ ಪಡೆದಿತ್ತು. ಈ ಸಲ ಶೇ.65.21 ಫಲಿತಾಂಶ ಪಡೆದುಕೊಂಡಿದೆ ಎಂದು ಮುಖ್ಯಶಿಕ್ಷಕ ಬಸವರಾಜ ಮಸರಕಲ್ ತಿಳಿಸಿದ್ದಾರೆ.