ಜಿಲ್ಲೆ

ರಾಮೇಶ್ವರ ಸಹಕಾರ ಸಂಘದ ಅಧ್ಯಕ್ಷ ಹೇಮಂತ್‌ಕುಮಾರ್


ಕುಶಾಲನಗರ: ಕೂಡುಮಂಗಳೂರು ರಾಮೇಶ್ವರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾಗಿ ಕೆ.ಕೆ.ಹೇಮಂತ್‌ಕುಮಾರ್ ಅವಿರೋಧವಾಗಿ ಆಯ್ಕೆಯಾದರು.


ಕಳೆದ 12 ದಿನಗಳ ಹಿಂದೆ ನಡೆದ ಸಹಕಾರ ಸಂಘದ ಆಡಳಿತ ಮಂಡಳಿಯ ಚುನಾವಣೆಯಲ್ಲಿ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದ ಹಾಸನ ಹಾಲು ಒಕ್ಕೂಟದ ಜಿಲ್ಲಾ ನಿರ್ದೇಶಕ ಕೆ.ಕೆ.ಹೇಮಂತ್‌ಕುಮಾರ್ ಸಂಘದ ಮೂರನೇ ಅವಧಿಗೆ ಗುರುವಾರ ಅಧ್ಯಕ್ಷರಾಗಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ವಿ.ಬಸಪ್ಪ ಅವಿರೋಧವಾಗಿ ಆಯ್ಕೆಯಾದರು.


ಆಡಳಿತ ಮಂಡಳಿ ನಿರ್ದೇಶಕರಾಗಿ ಅಯ್ಕೆಯಾಗಿದ್ದ ಕೃಷ್ಣೇಗೌಡ, ಎಸ್.ಆರ್.ಅರುಣ್‌ರಾವ್, ನಾಗರಾಜ್, ರಮೇಶ್, ಎಸ್.ಎಸ್.ಕೃಷ್ಣ, ಕೆ.ಪಿ.ರಾಜು, ಕೆ.ಜೆ.ಕುಮಾರ್, ಕೆ.ಬಿ.ರಾಮಚಂದ್ರ, ಕೆ.ಟಿ.ಅರುಣ್‌ಕುಮಾರ್, ಜಯಶ್ರೀ, ಕೆ.ಕೆ.ಪವಿತ್ರಾ ಹಾಜರಿದ್ದರು.


ಚುನಾವಣಾ ಅಧಿಕಾರಿಯಾಗಿ ಸಹಕಾರ ಇಲಾಖೆಯ ಅಧಿಕಾರಿ ಪಿ.ಬಿ.ಮೋಹನ್, ಸಂಘದ ಸಿಇಒ ಎಂ.ಪಿ.ಮೀನಾ ಹಾಜರಿದ್ದರು.