RemasterDirector_1a5c03258 
ಜಿಲ್ಲೆ

ಎಂ.ಹೇಮಾಮೃತಗೆ ಶೇ.99.6ರಷ್ಟು ಫಲಿತಾಂಶ

ನಾಗೇಶ ಎಸ್

ಪಿರಿಯಾಪಟ್ಟಣ: ಪಟ್ಟಣದ ವೇದಾಕ್ಷಿ ಗಣೀಶ್ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಮಾದೇಗೌಡ ಹಾಗೂ ಕಾರ್ಯದರ್ಶಿ ಉಮಾ ಅವರ ಪುತ್ರಿ ಎಂ.ಹೇಮಾಮೃತ ಐಸಿಎಸ್‌ಇ 10ನೇ ತರಗತಿಯಲ್ಲಿ ಶೇ.99.6 ಫಲಿತಾಂಶ ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಮೈಸೂರಿನ ಇಲವಾಲ ಬಳಿಯಿರುವ ಆಚಾರ್ಯ ವಿದ್ಯಾಕುಲದ ವಿದ್ಯಾರ್ಥಿನಿಯಾದ ಎಂ.ಹೇಮಾಮೃತ ಈ ಸಾಧನೆಗೆ ವೇದಾಕ್ಷಿ ಗಣೀಶ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು, ಶಾಲಾ ಆಡಳಿತ ಮಂಡಳಿ ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ.