ಜಿಲ್ಲೆ

ಮೊಬೈಲ್ ಗೀಳಿನಿಂದ ಹೊರಬರಲು ಸಹಕಾರಿ

ಇಂದಿರಾ ಎನ್ ಕೆ

ಕೋಟ: ಪ್ರಸಕ್ತ ಮಕ್ಕಳು ಹೆಚ್ಚು ಮೊಬೈಲ್ ಬಳಸುತ್ತಿದ್ದು, ಅದರ ಗೀಳಿನಿಂದ ಹೊರಬರಲು ಬೇಸಿಗೆ ಶಿಬಿರ ಸಹಕಾರಿ ಎಂದು ಪಾಂಡೇಶ್ವರ ಗ್ರಾ.ಪಂ.ಅಧ್ಯಕ್ಷೆ ಸುಶೀಲ ಸದಾನಂದ ಪೂಜಾರಿ ಹೇಳಿದರು.

ಪಾಂಡೇಶ್ವರ ಗ್ರಾ.ಪಂ. ಹಾಗೂ ಅರಿವು ಕೇಂದ್ರ ಡಿಜಿಟಲ್ ಗ್ರಂಥಾಲಯ ಮತ್ತು ವಾಹಿತಿ ಕೇಂದ್ರದ ಸಹಭಾಗಿತ್ವದಲ್ಲಿ ನಡೆದ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ ಸವಾರೋಪ ಸವಾರಂಭದಲ್ಲಿ ವಾತನಾಡಿದರು.

ಅದೆಷ್ಟೋ ಮಕ್ಕಳ ಸುಪ್ತ ಪ್ರತಿಭೆ ಹೊರಬರಲು ಗ್ರಾಮೀಣ ಶಿಬಿರಗಳು ಅತ್ಯಂತ ಪರಿಣಾಮಕಾರಿ. ಶಿಬಿರಗಳ ಜತೆ ಪರಿಸರ ಜಾಗೃತಿ ಹೊಂದಬೇಕು ಎಂದರು. ಪಂಚಾಯಿತಿ ಉಪಾಧ್ಯಕ್ಷ ವೈ.ಬಿ.ರಾವೇಂದ್ರ, ಅಭಿವೃದ್ಧಿ ಅಧಿಕಾರಿ ಲೋಲಾಕ್ಷಿ, ಸದಸ್ಯರಾದ ಸುಜಾತ ವೆಂಕಟೇಶ್ ಪೂಜಾರಿ, ಸಂಜೀವಿನಿ ಒಕ್ಕೂಟ ಎಂಬಿಕೆ ಉಷಾ ಗಣೇಶ್ ಪೂಜಾರಿ, ವಿಆರ್‌ಡಬ್ಲೂೃ ಶಾಂತಿ ಉಪಸ್ಥಿತರಿದ್ದರು. ಗ್ರಂಥಪಾಲಕಿ ಜ್ಯೋತಿ ಪೂಜಾರಿ ವಂದಿಸಿದರು.

ಸ್ಪರ್ಧೆ, ಬಹುಮಾನ ವಿತರಣೆ, ತರಬೇತಿ

ವಿವಿಧ ತಂಡಗಳಿಗೆ ಸ್ಪರ್ಧೆ ಏರ್ಪಡಿಸಿ, ಹೆಚ್ಚು ಅಂಕ ಪಡೆದ ತಂಡಗಳಿಗೆ ಸಸಿಗಳನ್ನು ಬಹುವಾನ ನೀಡಲಾಯಿತು. ಕಲಾಕೃತಿ ರಚನೆಯನ್ನು ಅರ್ಪಿತಾ ಬ್ರಹ್ಮಾವರ, ಚಿತ್ರಕಲೆ ಕುರಿತು ಪಜ್ಞಾ ಜಿ.ಪೂಜಾರಿ, ವಿವಿಧ ಸ್ಪರ್ಧೆ, ರಸಪ್ರಶ್ನೆ ಬಗ್ಗೆ ರಾವೇಂದ್ರ, ಕರಾಟೆ, ವಿವಿಧ ಚಟುವಟಿಗೆಗಳ ಬಗ್ಗೆ ನಟರಾಜ್, ನಾಯಕತ್ವ ಕುರಿತು ಅನಿತಾ ನರೇಂದ್ರ ಕುವಾರ್ ಕೋಟ ಮತ್ತು ಕ್ರಾಫ್ಟ್ ತರಬೇತಿ ಪೂರ್ಣಿವಾ ಸುನೀಲ್ ನೀಡಿದರು.