ಚಳ್ಳಕೆರೆ: ವಿದ್ಯಾರ್ಥಿ ದಿಸೆಯಲ್ಲಿ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ಉತ್ತಮ ನಾಯಕತ್ವ ಮತ್ತು ಸಮಾಜಮುಖಿ ಗುಣ ಮೈಗೂಡಿಸಿಕೊಳ್ಳಲು ಸಹಕಾರಿ ಆಗಲಿದೆ ಎಂದು ಜಿಲ್ಲಾ ಕೃಷಿ ಜಂಟಿ ನಿರ್ದೇಶಕ ಬಿ.ಮಂಜುನಾಥ ಹೇಳಿದರು.
ನಗರದ ಬಿಎಂಜಿಎಚ್‌ಎಸ್ ಶಾಲಾ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ತಳಕು ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಕ್ರೀಡಾ ಜ್ಯೋತಿ ಸ್ವೀಕರಿಸಿ ಮಾತನಾಡಿದರು.
ಬಿಇಒ ಕೆ.ಎಸ್.ಸುರೇಶ್, ಪೊಲೀಸ್ ಉಪಅಧೀಕ್ಷಕ ಟಿ.ಬಿ.ರಾಜಣ್ಣ, ಕೃಷಿ ಸಹಾಯಕ ನಿರ್ದೇಶಕ ಜೆ.ಅಶೋಕ್, ತಾಪಂ ಎಇಒ ಸಂಪತ್‌ಕುಮಾರ್, ಸಿ.ಟಿ. ವೀರೇಶ್, ಟಿ.ಟಿ. ಸಿದ್ದೇಶ್, ಮುಖ್ಯಶಿಕ್ಷಕರಾದ ಟಿ. ಮಾರಣ್ಣ, ಕೆ.ಆರ್.ಹರೀಶ್, ಎನ್. ಮೃತ್ಯುಂಜಯ, ಡಿ.ಶಾಂತೇಶ್, ಜಿ.ಎಸ್. ಮಲ್ಲೇಶ್, ಸಣ್ಣಸೂರಮ್ಮ, ಗುರುಮೂರ್ತಿ, ಎಸ್.ಟಿ. ತಿಪ್ಪೇಸ್ವಾಮಿ ಮತ್ತಿತರರು ಇದ್ದರು.