ಜಿಲ್ಲೆ

ಹಿಂದು ಯುವತಿಯರ ರಕ್ಷಣೆಗೆ ಸಹಾಯವಾಣಿ

ಹುಬ್ಬಳ್ಳಿ : ಲವ್ ಜಿಹಾದ್​ನಿಂದ ಹಿಂದು ಯುವತಿಯರ ರಕ್ಷಣೆಗಾಗಿ ಶ್ರೀರಾಮ ಸೇನೆ ಸಹಾಯವಾಣಿ (9090443444) ಪ್ರಾರಂಭಿಸಿದ್ದು, ಈ ಸಹಾಯವಾಣಿ ರಾಜ್ಯಾದ್ಯಂತ ದಿನದ 24 ತಾಸು ಕಾರ್ಯನಿರ್ವಹಿಸಲಿದೆ.

ಹುಬ್ಬ್ಳುಲ್ಲಿ ಬುಧವಾರದಂದು ಸಹಾಯವಾಣಿಗೆ ಚಾಲನೆ ನೀಡಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ, ಪ್ರೀತಿ, ಪ್ರೇಮದ ಹೆಸರಿನಲ್ಲಿ ಹಿಂದು ಯುವತಿಯರನ್ನು ಯೋಜನಾಬದ್ಧವಾಗಿ ಇಸ್ಲಾಂಗೆ ಮತಾಂತರ ಮಾಡುವ ಕುತಂತ್ರ ನಡೆಯುತ್ತಿದೆ ಎಂದು ಆರೋಪಿಸಿದರು.

ಘಜ್ನಿ ಮಹ್ಮದ್​ನಿಂದ ಟಿಪು್ಪ ಸುಲ್ತಾನ ಆಡಳಿತದವರೆಗಷ್ಟೇ ಅಲ್ಲದೇ, ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ನಡೆದಿರುವ ನೇಹಾ ಹಿರೇಮಠ ಹತ್ಯೆವರೆಗೂ ಲವ್ ಜಿಹಾದ್ ಯೋಜನೆ ಜಾರಿಯಲ್ಲಿ ಇದೆ. ನೇಹಾ ಹಿರೇಮಠ ಹತ್ಯೆ ಇಸ್ಲಾಂನ ಕ್ರೌರ್ಯತನದಿಂದ ಕೂಡಿದೆ. ಅಂಜಲಿ ಅಂಬಿಗೇರ ಹತ್ಯೆಯೂ ಇಂತಹದ್ದೇ ಕ್ರೌರ್ಯದಿಂದ ಕೂಡಿದೆ ಎಂದರು.

ಲವ್ ಜಿಹಾದ್ ತಡೆಯಬೇಕಿದ್ದ ರಾಜಕಾರಣಿಗಳು ಪರಸ್ಪರ ಕೆಸರೆರಚಾಟದಲ್ಲಿ ನಿರತರಾಗಿದ್ದಾರೆ. ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ. ಅಪರಾಧಿಗಳಿಗೆ ಸೂಕ್ತ ಶಿಕ್ಷೆ ನೀಡಬೇಕಿದ್ದ ಕಾನೂನು, ಸಾಕ್ಷಿಗಳು ಸಿಗಲಿಲ್ಲವೆಂದು ಕೈಚೆಲ್ಲುತ್ತಿದೆ ಎಂದು ಆರೋಪಿಸಿದರು.

ಲವ್ ಜಿಹಾದ್​ಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಹಿಂದು ಯುವತಿಯರು ನಿಲ್ಲಿಸಬೇಕು. ಇಂತಹ ಕೃತ್ಯಗಳಿಗೆ ಶ್ರೀರಾಮ ಸೇನೆ ಇನ್ನು ಮುಂದೆ ಸ್ಥಳದಲ್ಲಿಯೇ ಉತ್ತರ ಕೊಡಲಿದೆ. ನೇಹಾ ಹಿರೇಮಠಳನ್ನು ಹಾಡುಹಗಲೇ ಹತ್ಯೆ ಮಾಡಿದ ಆರೋಪಿ ಫಯಾಜ್​ನನ್ನಾಗಲಿ ಅಥವಾ ಅಂಜಲಿ ಅಂಬಿಗೇರ ಕೊಲೆಗೈದ ವಿಶ್ವನಾಥನನ್ನು ಸಾಕ್ಷಿ ಸಿಗಲಿಲ್ಲವೆಂದು ನ್ಯಾಯಾಲಯ ಬಿಡುಗಡೆಗೊಳಿಸಿದರೆ ಅವರಿಗೆ ಶ್ರೀರಾಮ ಸೇನೆಯೇ ಗಲ್ಲು ಶಿಕ್ಷೆ ವಿಧಿಸಲಿದೆ ಎಂದು ಎಚ್ಚರಿಕೆ ನೀಡಿದರು.

ರಾಜಕಾರಣಿಗಳು, ಪೊಲೀಸರು, ನ್ಯಾಯಾಲಯ ಲವ್ ಜಿಹಾದ್ ತಡೆಯಲು ವಿಫಲವಾಗಿದ್ದರಿಂದಲೇ ನೈತಿಕ ಪೊಲೀಸಗಿರಿಗೆ ಇಳಿಯುವುದು ಅನಿವಾಯವಾಗಿದೆ ಎಂದು ಹೇಳಿದರು.

ಹುಬ್ಬಳ್ಳಿ ಕೇಂದ್ರ ಸ್ಥಾನವನ್ನಾಗಿಟ್ಟುಕೊಂಡು ಈ ಸಹಾಯವಾಣಿ ಪ್ರಾರಂಭಿಸಲಾಗಿದೆ. ದಾವಣಗೆರೆ, ಮಂಗಳೂರು, ಬೆಂಗಳೂರು, ಕಲಬುರ್ಗಿ, ಬಾಗಲಕೋಟೆ ಜಿಲ್ಲೆಗಳಲ್ಲಿಯೂ ಈ ಸಹಾಯವಾಣಿಗೆ ಚಾಲನೆ ನೀಡಲಾಗಿದೆ. ಪ್ರತಿ ಜಿಲ್ಲೆಯಲ್ಲಿ ನ್ಯಾಯವಾದಿ, ವೈದ್ಯರು, ಮಹಿಳಾ ಕೌನ್ಸಿಲರ್​ಗಳು ಇರುವ ಐವರ ತಂಡವನ್ನು ಈ ಸಹಾಯವಾಣಿ ನಿರ್ವಹಣೆಗೆ ರಚಿಸಲಾಗಿದೆ ಎಂದು ತಿಳಿಸಿದರು.

ಹಿಂದು ಯುವತಿಯರ ತಂಟೆಗೆ ಬರದಂತೆ ಮುಲ್ಲಾಗಳು ಹಾಗೂ ಮೌಲ್ವಿಗಳು ತಮ್ಮ ಸಮಾಜದ ಯುವತಿಯರಿಗೆ ಬುದ್ಧಿ ಹೇಳಬೇಕು. ಇಲ್ಲದಿದ್ದರೆ ಅಂತಹ ಯುವಕರಿಗೆ ಶ್ರೀರಾಮ ಸೇನೆ ತಕ್ಕ ಪಾಠ ಕಲಿಸಲಿದೆ ಎಂದು ಎಚ್ಚರಿಕೆ ನೀಡಿದರು.

ಹಿಂದು ಯುವತಿಯರ ರಕ್ಷಣೆ ಜವಾಬ್ದಾರಿ ಗುತ್ತಿಗೆಯನ್ನು ಶ್ರೀರಾಮ ಸೇನೆ ಅಷ್ಟೇ ತೆಗೆದುಕೊಂಡಿಲ್ಲ. ಯುವತಿಯ ಪಾಲಕರೂ ಈ ಬಗ್ಗೆ ಜವಾಬ್ದಾರಿ ವಹಿಸಿಕೊಳ್ಳಬೇಕು. ತಮ್ಮ ಮಕ್ಕಳಿಗೆ ಈ ಬಗ್ಗೆ ಬುದ್ಧಿ ಹೇಳಬೇಕು ಎಂದು ಸಲಹೆ ನೀಡಿದರು.

ದೇಶದಾದ್ಯಂತ ಕಳೆದ 3 ವರ್ಷದಲ್ಲಿ 45 ಸಾವಿರ ಅಪ್ರಾಪ್ತ ಯುವತಿಯರು ಗರ್ಭಿಣಿಯರಾಗಿದ್ದಾರೆ. 40 ಸಾವಿರ ಮಹಿಳೆಯರು ನಾಪತ್ತೆಯಾಗಿದ್ದಾರೆ. ಇಷ್ಟಾದರೂ ಮಹಿಳೆಯರ ಸುರಕ್ಷತೆಯನ್ನು ರಾಜಕಾರಣಿಗಳು ಹಾಗೂ ಕಾನೂನು ಇಲಾಖೆ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಕಾಂಗ್ರೆಸ್ಸಿಗರನ್ನೂ ಬಿಡದ ದುಷ್ಕೃತ್ಯ: ಹಿಂದು ಧರ್ಮದಲ್ಲಿ ಇರುವಷ್ಟು ಸ್ವಾತಂತ್ರ್ಯ ಮುಂಸ್ಲಿ ಸಮಾಜದಲ್ಲಿ ಇಲ್ಲ ಎಂಬುದನ್ನು ನಮ್ಮ ಯುವತಿಯರು ಅರಿತುಕೊಳ್ಳಬೇಕು. ಮುಸ್ಲಿಂ ಯುವಕರು ನಾಲ್ಕೈದು ಮಹಿಳೆಯರನ್ನು ವಿವಾಹ ಆಗುತ್ತಾರೆ. ಅವರ ಪತ್ನಿಯರು ುಕ್ಕಳನ್ನು ಹೆರುವ ಯಂತ್ರ ಆಗುತ್ತಾರೆ ಎಂದು ಎಚ್ಚರಿಕೆ ನೀಡಿದರು.

ಮುಸ್ಲಿಂರು ಜನಸಂಖ್ಯೆ ಹೆಚ್ಚಿಸುವ ಉದ್ದೇಶದಿಂದ ಲವ್​ಜಿಹಾದ್ ಕೃತ್ಯಕ್ಕೆ ಕೈ ಹಾಕಿದ್ದಾರೆ. ಈಗಾಗಲೇ ಮುಸ್ಲಿಂ ಸಮಾಜದ ಜನಸಂಖ್ಯೆ ಶೇ. 14ರಷ್ಟು ಹೆಚ್ಚಿದೆ. ಹಿಂದು ಸಮಾಜದ ಜನಸಂಖ್ಯೆ ಶೇ. 7ರಷ್ಟು ಕುಸಿದಿದೆ. ಈ ಬಗ್ಗೆ ಜಾಗೃತಿ ವಹಿಸಬೇಕು ಎಂದು ತಿಳಿಸಿದರು.

ಕಾಂಗ್ರೆಸ್​ನವರು ಮತಬ್ಯಾಂಕ್ ರಾಜಕಾರಣಕ್ಕಾಗಿ ಈ ಎಲ್ಲ ದೃಷ್ಕೃತ್ಯಗಳನ್ನು ನೋಡಿಯೂ ಸುಮ್ಮನಿದ್ದಾರೆ. ಆದರೆ, ಕಾಂಗ್ರೆಸ್ ಕಾಪೋರೇಟರ್ ಪುತ್ರಿ ನೇಹಾ ಹಿರೇಮಠಳೇ ಲವ್​ಜಿಹಾದ್​ಗೆ ಬಲಿಯಾದಳು. ಕಾಂಗ್ರೆಸ್ ಎಂಎಲ್​ಸಿ ಮನೆಗೆ ಮುಸ್ಲಿಂರು ಬೆಂಕಿ ಹಚ್ಚಿದರು. ಇನ್ನಾದರೂ ರಾಜಕಾರಣಿಗಳು ಎಚ್ಚೆತ್ತುಕೊಳ್ಳಬೇಕು ಎಂದರು.

ಮುಂದಿನ ದಿನಗಳಲ್ಲಿ ಹಿಂದು ಯುವತಿಯರಿಗೆ ಲಾಠಿ, ತಲವಾರ್ ಹಿಡಿದು ಹೋರಾಟ ಮಾಡುವ ಬಗ್ಗೆ ತರಬೇತಿ ನೀಡುತ್ತೇವೆ. ಅವರನ್ನು ಮಾನಸಿಕ ಮತ್ತು ದೈಹಿಕವಾಗಿ ಮತ್ತಷ್ಟು ಸಬಲರನ್ನಾಗಿ ಮಾಡುತ್ತೇವೆ ಎಂದು ತಿಳಿಸಿದರು.

ಈ ಸಹಾಯವಾಣಿ ಲವ್​ಜಿಹಾದ್ ತಡೆಗಟ್ಟಲು ಮಾತ್ರ ಸೀಮಿತ. ಮುಸ್ಲಿಂ ಯುವತಿಯನ್ನು ಪ್ರೀತಿಸಿದ್ದ ಹಿಂದು ಯುವಕ ಪ್ರಕರಣಗಳೂ ಇದ್ದು, ಇಂತಹ ಸುಮಾರು 2 ಸಾವಿರ ವಿವಾಹ ಮಾಡಿಸಿದ್ದೇವೆ. ಅವರು ಸಂತೋಷವಾಗಿದ್ದಾರೆ ಎಂದು ಹೇಳಿದರು.

ಪ್ರಜ್ವಲ್ ರೇವಣ್ಣ ಹಗರಣವೂ ಸಂಪೂರ್ಣ ತಪು್ಪ. ಇದೊಂದು ಭಯಾನಕ ಕೃತ್ಯ. ಈಗಾಗಲೇ ಎಸ್​ಐಟಿ ರಚನೆಯಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪ್ರಮೋದ ಮುತಾಲಿಕ ಹೇಳಿದರು.