ನೂತನ ಫಿಜಿಯೋಥೆರಪಿ, ವೃತ್ತಿಪರ ತರಬೇತಿ ಹಾಗೂ ಶಾಲಾ ಕೊಠಡಿ ಉದ್ಘಾಟನೆ ಕಾರ್ಯಕ್ರಮದಲ್ಲಿ ನಗರದ ಪೊಲೀಸ್​ ಆಯುಕ್ತ ಭೂಷಣ ಬೋರಸೆ ಮಾತನಾಡಿದರು.ಡಾ.ಅಶ್ವಿನಿ ನರಸಣ್ಣವರ, ಉದಯಕುಮಾರ ಬಾಗನವರ, ಡಾ. ಮಹಾಂತೇಶ ಕಿವಡಸಣ್ಣನವರ ಇತರರಿದ್ದರು. 
ಜಿಲ್ಲೆ

ವಿಶೇಷಚೇತನರ ಬದುಕಿಗೆ ನೆರವಾಗಿ: ಭೂಷಣ ಬೋರಸೆ

ಬೆಳಗಾವಿ: ವಿಶೇಷಚೇತನ ಮಕ್ಕಳಿಗಾಗಿ ಸೇವೆ ಸಲ್ಲಿಸುತ್ತಿರುವ ಸಮರ್ಥನಂ ಸಂಸ್ಥೆ ಕಾರ್ಯ ಶ್ಲಾನೀಯ. ಸಮಾಜದ ಶ್ರೀಮಂತರು ಈ ಸೇವೆಗೆ ಕೈಜೋಡಿಸಿ ವಿಶೇಷಚೇತನ ಮಕ್ಕಳು ಇತರರಂತೆ ಬಾಳಲು ಅವಕಾಶ ಮಾಡಿಕೊಡಬೇಕು ಎಂದು ನಗರದ ಪೊಲೀಸ್​ ಆಯುಕ್ತ ಭೂಷಣ ಬೋರಸೆ ಅಭಿಮತ ವ್ಯಕ್ತಪಡಿಸಿದರು.

ನಗರದ ಮರಾಠ ಮಂಡಲ ಆವರಣದಲ್ಲಿರುವ ಸಮರ್ಥನಂ ಅಂಗವಿಕಲರ ಸಂಸ್ಥೆ ಹಾಗೂ ಆಪ್ಟಮ್​ ಸಂಸ್ಥೆ ಸಹಯೋಗದೊಂದಿಗೆ ವಿಕಲಚೇತನ ಮಕ್ಕಳ ಶಾಲೆಯಲ್ಲಿ ಸೋಮವಾರ ನೂತನ ಫಿಜಿಯೋಥೆರಪಿ, ವೃತ್ತಿಪರ ತರಬೇತಿ ಹಾಗೂ ಶಾಲಾ ಕೊಠಡಿ ಉದ್ಘಾಟಿಸಿ ಅವರು ಮಾತನಾಡಿದರು.

ನಗರದ ಸಮಾಜ ಸೇವಕ ಅನಿಲ್​ ಪೋತದಾರ್​ ಮಾತನಾಡಿದರು. ಕೆಎಲ್​ಇ ಸಂಸ್ಥೆ ಎನ್​ಎಸ್​ಎಸ್​ ವಿಭಾಗದ ಸಂಯೋಜಕಿ ಡಾ.ಅಶ್ವಿನಿ ನರಸಣ್ಣವರ ಮಾತನಾಡಿ, ಬುದ್ಧಿ ವಿಕಲಚೇತನ ಮಕ್ಕಳ ಪ್ರಗತಿಯಲ್ಲಿ ಶಿಕ್ಷಕರ ಪಾತ್ರ ಅಷ್ಟೇ ಮುಖ್ಯವಲ್ಲ, ಪಾಲಕರ ಪಾತ್ರವೂ ಅತ್ಯಮೂಲ್ಯವಾಗಿದೆ ಎಂದು ತಿಳಿಸಿದರು.

ಕೆಎಲ್​ಇ ಸಂಸ್ಥೆಯ ಉಪ ಪ್ರಾಂಶುಪಾಲ ಸಂತೋಷ ಮೆಟಗುಡ ಮಾತನಾಡಿ, ಸಂಸ್ಥೆ ವತಿಯಿಂದ ಫಿಜಿಯೋಥೆರಪಿ ಕೇಂದ್ರಕ್ಕೆ ವೈದ್ಯರನ್ನು ಕಳುಹಿಸಿ ಪ್ರತಿ ವಿದ್ಯಾರ್ಥಿಗೂ ಪ್ರತಿದಿನ ಕನಿಷ್ಠ 35 ರಿಂದ 45 ನಿಮಿಷಗಳ ಕಾಲ ಚಿಕಿತ್ಸೆ ನೀಡುವ ಅವಕಾಶ ಕಲ್ಪಿಸಲಾಗುವುದು ಎಂದರು.

ಪ್ರಾಂಶುಪಾಲರಾದ ಡಾ.ಗೀತಾ.ಕೆ, ಸಂಸ್ಥೆ ನಿರ್ದೇಶಕ ವೀರೇಶ್​ ಕಿವಡಸಣ್ಣನವರ, ಸಮರ್ಥನಂ ಸಂಸ್ಥೆ ಟ್ರಸ್ಟಿ ಉದಯಕುಮಾರ ಬಾಗನವರ ಮಾತನಾಡಿದರು. ಸಂಸ್ಥಾಪಕ ಡಾ.ಮಹಾಂತೇಶ ಕಿವಡಸಣ್ಣನವರ, ಕೇಂದ್ರದ ಮುಖ್ಯಸ್ಥ ಅರುಣಕುಮಾರ ಇತರರಿದ್ದರು.