ವಿಜಯವಾಣಿ ಸುದ್ದಿಜಾಲ ಕೋಟ
ವಿವಿಧ ಸ್ತರದ ಶೈಕ್ಷಣಿಕ ಕಾರ್ಯದಲ್ಲಿ ವಿದ್ಯಾರ್ಥಿಗಳನ್ನು ಗಟ್ಟಿಗೊಳಿಸಲು ಕಲಿಕಾ ಹಬ್ಬ ಸಹಕಾರಿ. ಶಿಕ್ಷಣ ಇಲಾಖೆಯ ಇಂಥ ಕಾರ್ಯಕ್ರಮಗಳು ಪಾಲಕರು ಮತ್ತು ವಿದ್ಯಾರ್ಥಿಗಳ ನಡುವಿನ ಸಮನ್ವಯತೆ ಹಾಗೂ ಪ್ರತಿಭಾ ಅನ್ವೇಷಣೆಗೆ ಸಹಕಾರಿ ಎಂದು ಬ್ರಹ್ಮಾವರ ಕ್ಷೇತ್ರ ಶಿಕ್ಷಣ ಸಮನ್ವಯ ಅಧಿಕಾರಿ ಸುರೇಶ್ ಕುಂದರ್ ಹೇಳಿದರು.
ಕಾರ್ಕಡ ಸಾಲಿಗ್ರಾಮ ಪಪಂ ವ್ಯಾಪ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಕಾರ್ಕಡ ಕ್ಲಸ್ಟರ್‌ಮಟ್ಟದ ಶಾಲಾ ಮಕ್ಕಳ ಕಲಿಕಾ ಹಬ್ಬ-2025 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಾಲಿಗ್ರಾಮ ಪಪಂ ಪೇಟೆ ವಾರ್ಡ್ ಸದಸ್ಯೆ ರತ್ನಾ ನಾಗರಾಜ್ ಗಾಣಿಗ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ವಿವಿಧ ಶಾಲಾ ಶಿಕ್ಷಕರಾದ ವಾಣಿ, ವಿಜಯ ಕುಮಾರ್, ಪಾರ್ವತಿ, ಕಸ್ತೂರಿ, ಪುಷ್ಪಲತಾ, ಸುಶೀಲಾ ಅವರನ್ನು ನೇಮಕಗೊಳಿಸಲಾಯಿತು.
ಸಾಮಾಜಿಕ ಕಾರ್ಯಕರ್ತೆ ತಿಲೋತ್ತಮೆ ನಾಯಕ್, ಹಳೇ ವಿದ್ಯಾರ್ಥಿ ಸಂಘ ಅಧ್ಯಕ್ಷ ಮುರುಳಿಧರ ನಾಯರಿ, ಎಸ್‌ಡಿಎಂಸಿ ಅಧ್ಯಕ್ಷ ದಿನೇಶ್ ಪೂಜಾರಿ, ಉಪಾಧ್ಯಕ್ಷೆ ಅನ್ನಪೂರ್ಣ ಉಪಸ್ಥಿತರಿದ್ದರು. ಮುಖ್ಯಶಿಕ್ಷಕಿ ಜ್ಯೋತಿ ಸ್ವಾಗತಿಸಿದರು. ಕಾರ್ಕಡ ಕ್ಲಸ್ಟರ್ ವಿಭಾಗದ ಸಿಆರ್‌ಪಿ ಸವಿತಾ ಆಚಾರ್ ವಂದಿಸಿದರು. ಶಿಕ್ಷಕಿ ಬೇಬಿ ಕಾರ್ಯಕ್ರಮ ನಿರೂಪಿಸಿದರು.