ಮುದ್ದೇಬಿಹಾಳ ತಾಲೂಕು ಕುಂಟೋಜಿಯಲ್ಲಿ ಏರ್ಪಡಿಸಿದ್ದ ಪುರಾಣ ಮಂಗಲೋತ್ಸವ, ಧರ್ಮ ಸಮನ್ವಯ ಸಮಾರಂಭವನ್ನು ಜಗದ್ಗುರು ಫಕೀರ ದಿಂಗಾಲೇಶ್ವರ ಶ್ರೀ ಉದ್ಘಾಟಿಸಿದರು. ಚನ್ನವೀರದೇವರು, ಚನ್ನಬಸವ ಶ್ರೀ, ಸಂಗನಬಸವ ಶ್ರೀ, ಅಲ್ಲಮಪ್ರಭು ಶೀ, ಶಿವಕುಮಾರ ಶ್ರೀ ಇತರರಿದ್ದರು. 
ಜಿಲ್ಲೆ

ಧರ್ಮ ಉಳಿಸುವ ಸ್ವಾಮಿಗಳಿಗೆ ಸಹಕಾರ ನೀಡಿ

ಗಿರೀಶ ಸಗರ

ಮುದ್ದೇಬಿಹಾಳ: ಧರ್ಮದ ಪರಂಪರೆ ಉಳಿಸುವ ಸ್ವಾಮಿಗಳಿಗೆ ಸಹಕಾರ ಕೊಡುವುದರಿಂದ ಸಮಾಜ, ಮಠಗಳು ಬೆಳೆಯುತ್ತವೆ. ಇಂಥವರನ್ನು ಜನರು ಬೆಳೆಸಬೇಕು. ಸಹಕಾರ ಇಲ್ಲದಿರುವಲ್ಲಿ ಉದ್ಧಾರ ಸಾಧ್ಯವಿಲ್ಲ ಎಂದು ಶಿರಹಟ್ಟಿಯ ಜಗದ್ಗುರು ಫಕೀರ ದಿಂಗಾಲೇಶ್ವರ ಶ್ರೀಗಳು ಹೇಳಿದರು.

ಕುಂಟೋಜಿಯ ಚನ್ನವೀರದೇವರ ಗುರುಪಟ್ಟಾಧಿಕಾರ ಮಹೋತ್ಸವದಲ್ಲಿ ಮಂಗಳವಾರ ರಾತ್ರಿ ಏರ್ಪಡಿಸಿದ್ದ ಕಲಬುರ್ಗಿ ಶರಣ ಬಸವೇಶ್ವರ ಪುರಾಣ ಮಂಗಲೋತ್ಸವ, ಧರ್ಮ ಸಮನ್ವಯ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿ, ಬೆಳೆಯಲು ಬಿಟ್ಟು ಉಳಿಯಲು ಬಿಡದಿರುವುದು ದೇಶದ ಇತಿಹಾಸ.

ಮಿಗಳೂ ಇದಕ್ಕೆ ಹೊರತಾಗಿಲ್ಲ. ಧರ್ಮಗಳು ಸಮನ್ವಯಗೊಂಡಾಗ ಅಭಿವೃದ್ಧಿ, ಶಾಂತಿ, ನೆಮ್ಮದಿ ಕಾಣಲು ಸಾಧ್ಯ. ಇಲ್ಲದಿದ್ದರೆ ಸ್ವರ್ಗದಂಥ ಭೂಮಿ ನರಕವಾಗುತ್ತದೆ ಎಂದರು.

ನಾಗನೂರು ರುದ್ರಾಕ್ಷಿಮಠದ ಅಲ್ಲಮಪ್ರಭು ಶ್ರೀ, ಕಪ್ಪತಗುಡ್ಡದ ಶಿವಕುಮಾರ ಶ್ರೀ, ಯರನಾಳದ ಸಂಗನಬಸವ ಶ್ರೀ ಮಾತನಾಡಿದರು. ಇಂಗಳೇಶ್ವರ ವಚನಶಿಲಾಮಂಟಪದ ಚನ್ನಬಸವ ಶ್ರೀ, ಕೆ. ಸೂಗೂರಿನ ಚನ್ನರುದ್ರಮುನಿ ಶಿವಾಚಾರ್ಯರು, ಗಡಿಗೌಡಗಾಂವನ ಶಾಂತಲಿಂಗ ಶಿವಾಚಾರ್ಯರು, ತೊರಗಲ್ ಗಚ್ಚಿನಮಠದ ಚನ್ನಮಲ್ಲ ಶಿವಾಚಾರ್ಯರು, ಯಕ್ಕುಂಡಿಯ ಪಂಚಾಕ್ಷರ ಶ್ರೀ, ಕಮತಗಿಯ ಹುಚ್ಚೇಶ್ವರ ಶ್ರೀ, ಮಸಬಿನಾಳದ ಸಿದ್ಧರಾಮ ಶ್ರೀ, ಕನಕಗಿರಿಯ ಚನ್ನಮಲ್ಲ ಶ್ರೀ, ಅಮೀನಗಡದ ಶಂಕರರಾಜೇಂದ್ರ ಶ್ರೀ, ಮನವಳ್ಳಿಯ ಮುರುಘೇಂದ್ರ ಶ್ರೀ, ಗುಳೇದಗುಡ್ಡದ ಒಪ್ಪತ್ತೇಶ್ವರ ಶ್ರೀ, ಕಾಶಿನಾಥ ಶ್ರೀ. ಇಂಗಳಗೇರಿ ಶರಣಮ್ಮನವರು, ಗುಂಡಕನಾಳದ ಗುರುಲಿಂಗ ಶಿವಾಚಾರ್ಯರು, ಇಟಗಿಯ ಗುರುಶಾಂತ ಶಿವಾಚಾರ್ಯರು, ಸಂಗಯ್ಯ ಶಾಸ್ತ್ರಿಗಳು, ಕವಡಿಮಟ್ಟಿಯ ಬಸವಪ್ರಭು ಹಿರೇಮಠ ಸಾನ್ನಿಧ್ಯ ವಹಿಸಿದ್ದರು.

ಉಮೇಶ ಕಾರಜೋಳ, ಚನ್ನಪ್ಪ ಕಂಠಿ, ಅಮರಣ್ಣ ಗಂಗನಗೌಡರ, ಮಹಾಂತಪ್ಪ ನಾವದಗಿ, ಶಿವಾನಂದ ಹಿರೇಮಠ, ಗುರು ತಾರನಾಳ, ಮುತ್ತುಸಾಹುಕಾರ ಅಂಗಡಿ, ವಾಸುದೇವ ಶಾಸ್ತಿ, ಕಾಶಿಮಪಟೇಲ ಪಾಟೀಲ, ಮುರಿಗೆಪ್ಪ ಸರಶೆಟ್ಟಿ. ಬಿ.ಜಿ. ಮಠ ಇತರರಿದ್ದರು.

ಅಶೋಕ ಹಂಚಲಿಯವರು ಯುವಕರಲ್ಲಿ ಆತ್ಮವಿಶ್ವಾಸ ಹಾಗೂ ರಾಷ್ಟ್ರಪ್ರೇಮ ಕುರಿತು, ರುದ್ರೇಶ ಕಿತ್ತೂರವರು ಆತ್ಮ ಸಾಕ್ಷಾತ್ಕಾರಕ್ಕಾಗಿ ಇಷ್ಟಲಿಂಗ ಪರಿಕಲ್ಪನೆ ಕುರಿತು ಉಪನ್ಯಾಸ ನೀಡಿದರು.

ಸಿವಿಲ್ ಜಡ್ಜ್ ಹುದ್ದೆಗೆ ಆಯ್ಕೆಯಾದ ಐಶ್ವರ್ಯ ಗುಡದಿನ್ನಿ, ಸ್ವಯಂ ಭೂ ಆರ್ಟ್ ಫೌಂಡೇಷನ್‌ನ ದೀಕ್ಷಾ ಭಿಸೆ, ದಿವ್ಯಾ ಭಿಸೆ ತಂಡ, ಸ್ವಾಮೀಜಿಯವರ ತೈಲವರ್ಣ ರಚಿಸಿದ್ದ ಚಿತ್ರಕಲಾವಿದ ಬಸವರಾಜ ಹಡಪದ ಹಾಗೂ ವೇದಿಕೆಯಲ್ಲಿದ್ದ ಸ್ವಾಮೀಜಿಗಳನ್ನು, ಗಣ್ಯರನ್ನು, ದಾನಿಗಳನ್ನು ಸಮಿತಿ ವತಿಯಿಂದ ಸನ್ಮಾನಿಸಲಾಯಿತು.

21 ದಿನಗಳವರೆಗೆ ನಡೆದ ಮಹಾದಾಸೋಹಿ ಕಲಬುರ್ಗಿಯ ಶರಣ ಬಸವೇಶ್ವರ ಪುರಾಣವನ್ನು ಪ್ರವಚನಕಾರರಾದ ಹಾವಗಿಲಿಂಗೇಶ್ವರ ಮಠದ ಶಾಂತಲಿಂಗ ಶಿವಾಚಾರ್ಯರು ಮಂಗಲ ನುಡಿ ಹೇಳಿ ಮಂಗಲಗೊಳಿಸಿದರು.

ಪ್ರಭುಗೌಡ ದೇಸಾಯಿ ಸ್ವಾಗತಿಸಿದರು. ಚನ್ನಮಲ್ಲ ದೇವರು, ರುದ್ರಮುನಿ ಶಿವಾಚಾರ್ಯರು ನಿರೂಪಿಸಿದರು. ಬಸವರಾಜ ನಾಲತವಾಡ ವಂದಿಸಿದರು.
ಇದಕ್ಕೂ ಮುನ್ನ ಶ್ರೀಮಠದಿಂದ ವೇದಿಕೆಯವರೆಗೆ ಎತ್ತಿನ ಬಂಡಿ, ತಲೆ ಮೇಲೆ ರೊಟ್ಟಿ ಬುತ್ತಿ ಹೊತ್ತ ಮಹಿಳೆಯರು ಮೆರವಣಿಗೆ ಮೂಲಕ ಆಗಮಿಸುವಾಗ ರೊಟ್ಟಿ ಬುತ್ತಿಗೆ ರಾಷ್ಟ್ರಧ್ವಜದ ಕೇಸರಿ, ಬಿಳಿ, ಹಸಿರು ಬಣ್ಣದ ಬಟ್ಟೆ ಹಾಕಿದ್ದು ರಾಷ್ಟ್ರಧ್ವಜವನ್ನೇ ತಲೆ ಮೇಲೆ ಹೊದ್ದು ಬಂದತ್ತಿತ್ತು.

ಪ್ರತಿಯೊಬ್ಬರೂ ಬಲಿಷ್ಠರೇ…!

ಸಾಮಾನ್ಯವಾಗಿ ಸ್ವಾಮಿ ವಿವೇಕಾನಂದ ಮತ್ತು ಮಹಾತ್ಮಾ ಗಾಂಧೀಜಿ ಕುರಿತು ಅನೇಕ ಚಿಂತಕರು, ದಾರ್ಶನಿಕರು ವೇದಿಕೆ ಮೇಲೆ ಭಾಷಣ ಮಾಡುವಾಗ ಪ್ರಸ್ತಾಪಿಸುವ ಎರಡು ವಿಚಾರಗಳ ಕುರಿತು ಶಿರಹಟ್ಟಿ ಭಾವೈಕ್ಯತಾ ಮಠದ ಜಗದ್ಗುರು ಫಕೀರ ದಿಂಗಾಲೇಶ್ವರ ಶ್ರೀಗಳು ತಮ್ಮದೆ ಆದ ವ್ಯಾಖ್ಯಾನ ಮಂಡಿಸಿದ್ದು ಗಮನಸೆಳೆಯಿತು. ಅನೇಕರು ತಮ್ಮ ಭಾಷಣದಲ್ಲಿ ‘‘100 ಜನ ಬಲಿಷ್ಠ ಮಾಂಸಖಂಡ, ನರಗಳನ್ನು ಹೊಂದಿರುವಂಥ ಸಧೃಡ ಯುವಕರನ್ನು ನನಗೆ ಕೊಟ್ಟರೆ ಭಾರತವನ್ನು ಬದಲಿಸುತ್ತೇನೆ’ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾಗಿ ಹೇಳುತ್ತಾರೆ. ಜನಸಂಖ್ಯೆ ವಿಚಾರದಲ್ಲಿ ಜಗತ್ತಿನ ಎರಡನೇ ಸ್ಥಾನದಲ್ಲಿರುವ ಭಾರತದಲ್ಲಿ ಅಂಥ 100 ಯುವಕರು ವಿವೇಕಾನಂದರಿಗೆ ಸಿಗಲಿಲ್ಲವೇ? ಅನ್ನೋ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಅದೇ ರೀತಿಯಲ್ಲಿ ‘ಅಧಿಕಾರ ನನಗೆ ಸಿಕ್ಕರೆ ದೇಶದಲ್ಲಿ ಮೊದಲು ಮಾಡುವ ಕೆಲಸ ಸಾರಾಯಿ ನಿಷೇಧ’ ಎಂದು ಮಹಾತ್ಮಾ ಗಾಂಧೀಜಿ ಹೇಳಿದ್ದಾಗಿ ಹೇಳುತ್ತಾರೆ. ಆದರೆ ದೇಶ ಕಟ್ಟುವ, ಸರ್ಕಾರ ರಚಿಸುವ, ಪ್ರಧಾನಿ, ರಾಷ್ಟ್ರಪತಿ ಬದಲಾಯಿಸುವ ಶಕ್ತಿ ಹೊಂದಿದ್ದ ಗಾಂಧೀಜಿಯವರಿಂದ ಸಾರಾಯಿ ನಿಷೇಧ ಮಾಡುವುದು ಯಾಕಾಗಲಿಲ್ಲ? ಎನ್ನುವ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಅಲ್ಲದೇ, ಗಾಂಧೀಜಿಯವರು ಅಧಿಕಾರ ವಹಿಸಿಕೊಳ್ಳಿ ಅಂದಾಗ, ಒಲ್ಲೆ ಅಂದಿದ್ದು ಎಲ್ಲರಿಗೂ ಗೊತ್ತಿದೆ. ಇಂಥ ವಿಚಾರಗಳನ್ನು ಅವರು ನಿಜವಾಗಿಯೂ ಹೇಳಿದ್ದರೆ? ಇಂಥ ಕಲ್ಪಿತ ವಿಚಾರಗಳನ್ನು ಜನರೊಂದಿಗೆ ಹಂಚಿಕೊಳ್ಳಬಾರದು. ಸುದೀರ್ಘ 30 ವರ್ಷಗಳ ಹಗಲು ರಾತ್ರಿ ಅಧ್ಯಯನದಲ್ಲಿ ನಾನು ಕಂಡಿರುವಂಥದ್ದೇನೆಂದರೆ ಈ ದೇಶದಲ್ಲಿ 100 ಜನ ಬಲಿಷ್ಠರಲ್ಲ ಹುಟ್ಟುವ ಪ್ರತಿಯೊಬ್ಬರೂ ಬಲಿಷ್ಠರಾಗಿ ಬೆಳೆಯುತ್ತಾರೆ. ಆದರೆ ಸಮಾಜದ ಕೈಯಲ್ಲಿ ಸಿಕ್ಕು ಹಾಳಾಗಿ ಹೋಗ್ತಾರೆ ಎಂದು ವಿಶ್ಲೇಷಿಸಿದರು.