ರೋಣ: ಪ್ರತಿಯೊಬ್ಬರೂ ಮನೆ ಸ್ವಚ್ಛವಾಗಿಟ್ಟಕೊಳ್ಳುವಂತೆ ಗ್ರಾಮವನ್ನು ಚೊಕ್ಕವಾಗಿಡಲು ಸಹಕರಿಸಬೇಕು ಎಂದು ಯಾವಗಲ್ಲ ಗ್ರಾಪಂ ಪಿಡಿಒ ಇಮಾಮಸಾಬ್ ಬೊದ್ಲೆಖಾನ್ ಹೇಳಿದರು.
ತಾಲೂಕಿನ ಯಾವಗಲ್ಲ ಗ್ರಾಮದಲ್ಲಿ ಜಿಪಂ, ತಾಪಂ ಹಾಗೂ ಯಾವಗಲ್ಲ ಗ್ರಾಪಂ ಆಶ್ರಯದಲ್ಲಿ ಬುಧವಾರ ಏರ್ಪಡಿಸಿದ್ದ ‘ಸ್ವಚ್ಛತಾ ಹೀ ಸೇವಾ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ನೀರನ್ನು ಹಿತ, ಮಿತವಾಗಿ ಬಳಸದಿದ್ದರೆ ಗ್ರಾಮದಲ್ಲಿ ಅನೈರ್ಮಲ್ಯ ಉಂಟಾಗಿ ಸಾಂಕ್ರಾಮಿಕ ರೋಗ ಭೀತಿ ಹೆಚ್ಚುತ್ತದೆ. ಅಲ್ಲದೆ, ಪರಿಸರ ಮಾಲಿನ್ಯವೂ ಉಂಟಾಗುತ್ತದೆ. ನೀರನ್ನು ಮಿತವಾಗಿ ಬಳಸಬೇಕು ಮತ್ತು ಮಲ ವಿಸರ್ಜನೆಗೆ ಮನೆಯಲ್ಲಿ ಕಡ್ಡಾಯವಾಗಿ ಶೌಚಗೃಹ ನಿರ್ವಿುಸಿಕೊಳ್ಳಬೇಕು ಎಂದರು.
ಗ್ರಾಪಂ ಅಧ್ಯಕ್ಷೆ ಲಲಿತಾ ರೋಣದ, ಉಪಾಧ್ಯಕ್ಷ ಶಿವಾನಂದ ಮೀಶಿ, ಗ್ರಾಪ. ಸದಸ್ಯರು , ಅಂಗನವಾಡಿ ಮೇಲ್ವಿಚಾರಕರು, ಸಂಜೀವಿನಿ ಒಕ್ಕೂಟದ ಮಹಿಳಾ ಸದಸ್ಯರು ಪಾಲ್ಗೊಂಡಿದ್ದರು.