ಜಮಖಂಡಿ ನಗರದ ರಘುತ್ತಮ ರಾಯರ ಮಠದ ಜೀರ್ಣೋದ್ಧಾರ ಸಭೆಯಲ್ಲಿ ಪಂಡಿತ ರಂಗಾಚಾರ್ಯ ಜೋಶಿ ಮಾತನಾಡಿದರು. 
ಜಿಲ್ಲೆ

ಮಠದ ಕಟ್ಟಡ ನಿರ್ಮಾಣಕ್ಕೆ ನೆರವಾಗಿ

ಗಿರೀಶ ಸಗರ

ಜಮಖಂಡಿ:ಮಠ-ಮಂದಿರಗಳನ್ನು ಯಾರು ಬೇಕಾದರೂ ಕಟ್ಟಬಹುದು.ಅದರ ನಿರ್ವಹಣೆ ಮತ್ತು ಪೂಜೆ ಮಾಡಿಕೊಂಡು ಮುನ್ನಡೆಸುವುದು ಮುಖ್ಯವಾಗಿದ್ದು,ನಗರದ ಶ್ರೀ ರಘುತ್ತಮ,ರಾಯರ ಮಠ ಕಳೆದ 5 ವರ್ಷದಿಂದ ನಿರಂತರವಾಗಿ ಭಕ್ತರನ್ನು ತನ್ನತ್ತ ಸೆಳೆಯುತ್ತಿದೆ ಎಂದು ಪಂಡಿತ ರಂಗಾಚಾರ್ಯ ಜೋಶಿ ಹೇಳಿದರು.

ನಗರದ ಸಾಬಡೆ ಗಲ್ಲಿಯ ರಘುತ್ತಮ ರಾಘವೇಂದ್ರಸ್ವಾಮಿಗಳ ಮಠದಲ್ಲಿ ಮಠದ ಜೀರ್ಣೋದ್ಧಾರ ಸಮಿತಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು,ಈ ಕಟ್ಟಡವು ಬಹಳ ಹಳೆಯದಾಗಿದ್ದು,ಅದರ ಪುನರುಜ್ಜೀವನ ಮಾಡಬೇಕಾಗಿದೆ.

ಜೀರ್ಣೋದ್ಧಾರಕ್ಕಾಗಿ ಶ್ರೀ ರಾಘವೇಂದ್ರ ಸ್ವಾಮಿಗಳ ಭಕ್ತಾದಿಗಳು ತನು, ಧನದಿಂದ ಸಹಾಯ ನೀಡಬೇಕು.ಅದಕ್ಕಾಗಿ ಸ್ಥಳೀಯ ಅರ್ಬನ್ ಬ್ಯಾಂಕ್ ಮುಖ್ಯ ಶಾಖೆಯಲ್ಲಿ ಬ್ಯಾಂಕ್ ಖಾತೆ ತೆಗೆದಿದ್ದು,ಅಲ್ಲಿ ತಾವು ಹಣ ಸಂದಾಯ ಮಾಡಬಹುದು.

ವಸ್ತು ರೂಪದಲ್ಲಿ ದೇಣಿಗೆ ನೀಡುವವರು ಮೊ.76189,93666 ಸಂಖ್ಯೆಗೆ ಸಂಪರ್ಕಿಸಬಹುದು.

ನ್ಯಾಯವಾದಿ ನಿತಿನ್ ಹುಲ್ಯಾಳಕರ,್ನಿವೃತ್ತ ಅಭಿಯಂತರ ಶಿವಲಿಂಗ ದೇಸಾಯಿ ಮಾತನಾಡಿದರು.ಪಾಂಡುರಂಗಾಚಾರ್ಯ ಲಗಲಿ,ಯದುನಂದನಾಚಾರ್ಯ ಗಲಗಲಿ,ಆನಂದ ಕುಲಕರ್ಣಿ,ರಮೇಶ ಕನಕೇರಿ,ಪಂಢರಿ ವೈದ್ಯ,ರಾಜೇಂದ್ರ ಹುಲ್ಯಾಳಕರ,ರಘುತ್ತಮಾಚಾರ್ಯ ಜೋಶಿ ಇತರರು ಇದ್ದರು.